ಸುಳ್ಯ:ಅಂತಾರಾಜ್ಯ ಸಂಪರ್ಕದ ಸುಳ್ಯ-ನಾರ್ಕೋಡು-ಆಲೆಟ್ಟಿ- ಬಡ್ಡಡ್ಕ ರಸ್ತೆಯನ್ನು ಸರ್ವ ಋತು ರಸ್ತೆಯಾಗಿ ಅಭಿವೃದ್ಧಿ ಪಡಿಸಬೇಕು ಎಂದು ಕೇರಳದ ಬಿಜೆಪಿ ಮುಖಂಡರು ದ.ಕ.ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬಿಜೆಪಿ ಆಲೆಟ್ಟಿ ಮಹಾ ಶಕ್ತಿ ಕೇಂದ್ರದ ವತಿಯಿಂದ ಜು.15ರಂದು ನಡೆದ ಕಾರ್ಯಕರ್ತರ ಸಭೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸುಳ್ಯ ವಿಧಾನಸಭಾ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಇತರ ನಾಯಕರು ಭಾಗವಹಿಸಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕಲ್ಲಪ್ಪಳ್ಳಿಯ ಬಿಜೆಪಿ ಬೂತ್ ಸಮಿತಿಯ ವತಿಯಿಂದ ಹದಗೆಟ್ಟಿರುವ ನಾರ್ಕೋಡ್ನಿಂದ ಬಡ್ಡಡ್ಕ ವರೆಗಿನ ರಸ್ತೆಯ ಅಭಿವೃದ್ಧಿ ಮಾಡಲು ಮತ್ತು ಬಡ್ಡಡ್ಕ,ಕೂರ್ನಡ್ಕ, ಪೆರಾಜೆ ಹಾಗೂ ಕಲ್ಲಪ್ಪಳ್ಳಿಯ ಕಮ್ಮಾಡಿ ಗರುಗುಂಜ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಸಂಪೂರ್ಣ ಶಿಥಿಲಗೊಂಡಿರುವ ಕೂರ್ನಡ್ಕದ ಹಳೆಯ ಸೇತುವೆ ಬದಲು ಹೊಸ ಸೇತುವೆ ನಿರ್ಮಾಣ ಮಾಡಬೇಕು ಎಂದು ಮನವಿ ಸಲ್ಲಿಸಲಾಯಿತು.ಈ ಭರವಸೆ ಈಡೇರಿಸುವ ಭರವಸೆಯನ್ನು ಸಂಸದರು ಮತ್ತು ಶಾಸಕರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವೆಳ್ಳರಿಕುಂಡು ಬಿಜೆಪಿ ಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಕೆ ಕೆ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ರಾಮಚಂದ್ರ ಸರಳಾಯ, ಬಿಜೆಪಿ ಪಂಚಾಯತ್ ಅಧ್ಯಕ್ಷ ರಾಮಚಂದ್ರನ್, ನಂದಕುಮಾರ್ ಬಾಟೋಳಿ, ಜಯಪ್ರಕಾಶ್ ಪೆರುಮುಂಡ ಹಾಗೂ ರಾಜಶೇಖರ ದೊಡ್ಡಮನೆ ಹಾಗೂ ಕೂರ್ನಡ್ಕ, ಗರುಗುಂಜ ಪ್ರದೇಶದ ಕಾರ್ಯಕರ್ತರು ಉಪಸ್ಥಿತರಿದ್ದರು.





