ಸುಳ್ಯ: ಆಲೆಟ್ಟಿ ಗ್ರಾಮದ ಬಡ್ಡಡ್ಕ-ಕೂರ್ನಡ್ಕ ಭಾಗಕ್ಕೆ ಕೆಎಸ್ಆರ್ಟಿಸಿ ಬಸ್ ಸರ್ವೀಸ್ ಜು.14ರಂದು ಆರಂಭಗೊಂಡಿದೆ. ಬೆಳಿಗ್ಗೆ 7.30ಕ್ಕೆ ಸುಳ್ಯದಿಂದ ಹೊರಡುವ ಬಸ್ 8 ಗಂಟೆಗೆ ಕೂರ್ನಡ್ಕ ತಲುಪಿ.8.15ಕ್ಕೆ ಕೂರ್ನಡ್ಕದಿಂದ ಪುನಾಃ ಹೊರಡಲಿದೆ. ಸಂಜೆ 4.30ಕ್ಕೆ ಸುಳ್ಯದಿಂದ ಹೊರಟು 5 ಗಂಟೆಗೆ ಕೂರ್ನಡ್ಕದಿಂದ ಸುಳ್ಯಕ್ಕೆ ಹೊರಡಲಿದೆ.ಬಸ್ಗೆ ಸಾರ್ವಜನಿಕರು ಸ್ವಾಗತ ನೀಡಿದರು.ಆಲೆಟ್ಟಿ ಗ್ರಾಮ ಪಂಚಾಯತ್
ಅಧ್ಯಕ್ಷೆ ವೀಣಾ ವಸಂತ್ ಶುಭ ಹಾರೈಸಿ ತೆಂಗಿನಕಾಯಿ ಒಡೆಯುದರ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಗೀತಾ ಕೊಲ್ಚಾರ್ ಪಂಚಾಯತ್ ಸದಸ್ಯರಾದ ಭಾಗೀರಥಿ, ಸತ್ಯಕುಮಾರ ಆಡಿಂಜ ಕಾಂಗ್ರೆಸ್ ನಾಯಕರಾದ ಗೋಕುಲದಾಸ್ ಸುಳ್ಯ, ತೇಜಕುಮಾರ್ ಬಡ್ಡಡ್ಕ, ಪ್ರಸನ್ನ ಬಡ್ಡಡ್ಕ, ದೋಣಿಮೂಲೆ ಪುರುಷೋತ್ತಮ, ನವೀನ ಗುಂಡ್ಯ, ಪವಿತ್ರ ಗುಂಡ್ಯ, ಕೇಶವ ಮೊರಂಗಲ್ಲು , ಸುಳ್ಯ ತಾಲೂಕು ಪಂಚಾಯತ್ ಕೆಡಿಪಿ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ ಮೊದಲಾದವರು ಉಪಸ್ಥಿತರಿದ್ದರು. ಆ ಭಾಗದ ಬಹುದಿನ ಬೇಡಿಕೆಯಂತೆ ಬಸ್ ಸಂಚಾರ ಆರಂಭಗೊಂಡ ಸಂತಸದಲ್ಲಿ ಆ ಭಾಗದ ಬಸ್ಸಿಗೆ ಹೂಮಳೆ ಹಾಕಿ ಆರತಿ ಎತ್ತಿ ಶುಭಹಾರೈಸಿದರು.ಕಳೆದ ವಾರ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ
ಆಲೆಟ್ಟಿ ಗ್ರಾಮ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸತ್ಯಕುಮಾರ ಅಡಿಂಜ,ಕೆಡಿಪಿ ಸದಸ್ಯ ಧರ್ಮಪಾಲ ಕೊಯಿಂಗಾಜೆ ನೇತೃತ್ವದಲ್ಲಿ ಬಡ್ಡಡ್ಕ ಭಾಗಕ್ಕೆ ಬಸ್ ಆರಂಭಿಸುವಂತೆ ಮನವಿ ಸಲ್ಲಿಸಿದ್ದರು.





