ಸುಳ್ಯ:ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಆಯುಧ ಪೂಜೆ ನಡೆಯಿತು. ಅರ್ಚಕರಾದ ನಾರಾಯಣ ಭಟ್ ಅವರ ನೇತೃತ್ವದಲ್ಲಿ ಪೂಜೆ ನಡೆಸಲಾಯಿತು.ಸಂಸ್ಥೆಯ
ಪ್ರಾಂಶುಪಾಲರಾದ ಡಾ. ಲೀಲಾಧರ ಡಿ. ವಿ. ಅವರ ನೇತೃತ್ವದಲ್ಲಿ ಪೂಜಾ ಆರಂಭಗೊಂಡು ಬಳಿಕ ಸಂಸ್ಥೆಯ ಎಲ್ಲಾ ವಿಭಾಗಗಳಿಗೂ, ವಾಹನಗಳಿಗೂ ಆಯುಧ ಪೂಜೆ ನಡೆಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದ, ಉಪಾಧ್ಯಕ್ಷರಾದ ಶೋಭಾ ಚಿದಾನಂದ ಇವರ ಉಪಸ್ಥಿತಿಯಲ್ಲಿ ಮಹಾ ಮಂಗಳಾರತಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿ, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸಿತರಿದ್ದರು












