ಸುಳ್ಯ:ಸ್ಕೂಟಿ ಹಾಗೂ ಬಸ್ ಮಧ್ಯೆ ಅಪಘಾತ ಸಂಭವಿಸಿ ಸ್ಕೂಟಿ ಸವಾರ ಮೃತಪ್ಟ ಘಟನೆ ಸೋಣಂಗೇರಿಯ ಸುತ್ತುಕೋಟೆ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ. ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ
ಪಿಗ್ಮಿ ಸಂಗ್ರಾಹಕರಾಗಿರುವ ರಾಮಚಂದ್ರ ಪ್ರಭು ಅವರು ಮೃತಪಟ್ಟವರು. ರಾಮಚಂದ್ರ ಪ್ರಭು ಅವರು ಸ್ಕೂಟಿಯಲ್ಲಿ ಸುಳ್ಯಕ್ಕೆ ಬರುತ್ತಿದ್ದ ವೇಳೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮಧ್ಯೆ ಸುತ್ತುಕೋಟೆ ಬಳಿ ಅಪಘಾತ ಸಂಭವಿಸಿ ರಾಮಚಂದ್ರ ಪ್ರಭುರ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರೆಂದು ತಿಳಿದು ಬಂದಿದೆ.





