ಸುಳ್ಯ:ಆಟೋ ರಿಕ್ಷಾ ಎಲ್.ಪಿ.ಜಿ ಇಂಧನ ದರ ಕಡಿಮೆ ಮಾಡಬೇಕು ಎಂದು ಆಗ್ರಹಿಸಿ ಸುಳ್ಯ ತಾಲೂಕು ಸ್ನೇಹ ಸಂಗಮ ಆಟೋ ಚಾಲಕ ಮಾಲಕರ ಸಂಘದ ವತಿಯಿಂದ ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಆಟೋ ಚಾಲಕರಾಗಿ ದುಡಿದು ಜೀವನ ಸಾಗಿಸುತ್ತಿದ್ದು, ಎಲ್.ಪಿ.ಜಿ ಇಂಧನ ಉಪಯೋಗ
ಮಾಡಿ ಆಟೋ ಚಾಲನೆ ನಡೆಸುತ್ತಿದ್ದೇವೆ. ದಿನದಿಂದ ದಿನಕ್ಕೆ ಎಲ್.ಪಿ.ಜಿ ದರ ಏರುತ್ತಿದ್ದು, ಇದೀಗ ದರ. ರೂ.93.70/- ಆಗಿರುತ್ತದೆ. ಇಂಧನ ದರ ಏರಿಕೆ ಯಾಗಿರುವುದರಿಂದ ನಮಗೆ ಜೀವನ ನಿರ್ವಹಿಸಲು ಕಷ್ಟಕರವಾಗಿರುತ್ತದೆ. ಆದುದರಿಂದ ಎಲ್.ಪಿ ಜಿ ದರ ಇಳಿಕೆ ಮಾಡಿ ಬಡ ಆಟೀ ರಿಕ್ಷಾ ಚಾಲಕರಿಗೆ ಮತ್ತು ದೈನಂದಿನ ಚಟುವಟಿಕೆಗಳಿಗೆ ಆಟೋ ರಿಕ್ಷಾವನ್ನೇ ಅವಲಂಭಿಸಿರುವ ಗ್ರಾಹಕರಿಗೆ ಹೊರೆಯಾಗುವುದನ್ನು ತಪ್ಪಿಸಲು ಎಲ್.ಪಿ.ಜಿ ಇಂಧನ ದರ ಇಳಿಕೆ ಮಾಡಬೇಕು. ಎಲ್ಪಿಜಿ ಇಂಧನ ಲಭ್ಯವಾಗುವಂತೆ ಮಾಡಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಸಂಘದ ಗೌರವಾಧ್ಯಕ್ಷ ಹಾಗೂ ಇಂಟೆಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಅಧ್ಯಕ್ಷ ಪದ್ಮನಾಭ ಹರ್ಲಡ್ಕ, ಕಾರ್ಯದರ್ಶಿ ದಯಾನಂದ ಬಳ್ಳಡ್ಕ, ಪದಾಧಿಕಾರಿಗಳಾದ ಕರುಣಾಕರ ದೋಳ, ಐತ್ತಪ್ಪ ನಾಯ್ಕ ಅಡ್ಕಾರು, ಮಹಮ್ಮದ್ ಕೇರ್ಪಳ, ಅಬೂಬಕ್ಕರ್ ಅಜ್ಜಾವರ, ಧನೇಶ್ ಕುತ್ತಿಮುಂಡ, ಚಂದ್ರಶೇಖರ ಉರುಂಡೆ, ಜಯಕುಮಾರ್ ಚೊಕ್ಕಾಡಿ, ಲತೀಶ್ ಡಿ.ಜೆ, ಹಮೀದ್ ಬಾಳೆಮಕ್ಕಿ,ಇಬ್ರಾಹಿಂ ನಾವೂರು, ಪ್ರಮುಖರಾದ ಭವಾನಿಶಂಕರ ಕಲ್ಮಡ್ಕ, ಮಂಜುನಾಥ ಮಡ್ತಿಲ ಉಪಸ್ಥಿತರಿದ್ದರು.








