ಪರ್ತ್: ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನ ಬೌಲರ್ಗಳು ಮೇಲುಗೈ ಸಾಧಿಸಿದ್ದಾರೆ. ಮೊದಲೆರಡು ಸೆಷನ್ಗಳಲ್ಲಿ ಆಸ್ಟ್ರೇಲಿಯಾ ಬೌಲರ್ಗಳು ಮಿಂಚಿದರೆ, ಅಂತಿಮ ಸೆಷನ್ನಲ್ಲಿ ಇಂಗ್ಲೆಂಡ್ ವೇಗಿಗಳು ಆಸೀಸ್ ಬ್ಯಾಟರ್ಗಳನ್ನು ಕಾಡಿದ್ದಾರೆ.ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸ್ನಲ್ಲಿ 172 ರನ್ಗಳಿಗೆ ಆಲೌಟ್ ಆಯಿತು. ಅದಕ್ಕೆ ಉತ್ತರವಾಗಿ
ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಕೂಡ 123 ರನ್ಗಳಿಗೆ 9 ವಿಕೆಟ್ ಕಳೆದುಕೊಂಡು ಇನಿಂಗ್ಸ್ ಹಿನ್ನಡೆಯ ಸಂಕಷ್ಟಕ್ಕೆ ಸಿಲುಕಿದೆ.ಆಸ್ಟ್ರೇಲಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ವೆದರ್ಲ್ಯಾಂಡ್ (0), ಮಾರ್ನಸ್ ಲಾಬುಶೇನ್ (9), ನಾಯಕ ಸ್ಟೀವನ್ ಸ್ಮಿತ್ (17), ಉಸ್ಮನ್ ಖವಾಜ (2), ಟ್ರಾವಿಸ್ ಹೆಡ್ (21), ಕ್ಯಾಮರೂನ್ ಗ್ರೀನ್ (24) ಹಾಗೂ ಅಲೆಕ್ಸ್ ಕ್ಯಾರಿ (26) ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.ಇಂಗ್ಲೆಂಡ್ ಪರ ಅಮೋಘ ಬೌಲಿಂಗ್ ದಾಳಿ ನಡೆಸಿದ ನಾಯಕ ಬೆನ್ ಸ್ಟೋಕ್ಸ್ 5 ವಿಕೆಟ್ ಪಡೆದು ಮಿಂಚಿದರು. ಜೋಫ್ರಾ ಆರ್ಚರ್ ಹಾಗೈ ಬೈಡನ್ ಕಾರ್ಸ್ ಕೂಡ ತಲಾ 2 ವಿಕೆಟ್ ಪಡೆದುಕೊಂಡರು.
ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ಮಿಚೆಲ್ ಸ್ಟಾರ್ಕ್ ಅವರ ಬೌಲಿಂಗ್ ದಾಳಿ ಎದುರಿಸಲು ಪರದಾಡಿದರು. ಸ್ಟಾರ್ಕ್ ಅವರು ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ ಅತ್ಯುತ್ತಮ ಬೌಲಿಂಗ್ (58/7) ಪ್ರದರ್ಶಿಸಿದರು.ಇಂಗ್ಲೆಂಡ್ ಪರ ಹ್ಯಾರಿ ಬ್ರೂಕ್ (52: 61 ಎಸೆತ, 4X5, 1X6) ಗಳಿಸಿದ್ದು ಅತ್ಯಧಿಕ ಮೊತ್ತವಾಯಿತು. ಓಲಿ ಪೋಪ್ (46) ಹಾಗೂ ಜೇಮಿ ಸ್ಮಿತ್ (33) ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು.





