ಸುಳ್ಯ: ಈ ವರ್ಷದ ಮುಂಗಾರು ಮಳೆ ಕೊನೆಯ ಹಂತಕ್ಕೆ ಬಂದಿದ್ದು ಇನ್ನೊಂದು ತಿಂಗಳಲ್ಲಿ ಮುಂಗಾರು ಮಳೆ ಮುಕ್ತಾಯ ಹಂತಕ್ಕೆ ಬಂದಿದೆ.
ಈ ವರ್ಷದ ಮಳೆ ಭರ್ಜರಿಯಾಗಿ ಸುರಿದು ಉತ್ತಮ ಮಳೆಯಾಗಿದೆ. ಹಾಗಾದರೆ ಸುಳ್ಯದಲ್ಲಿ ಈ ವರ್ಷ ಎಷ್ಟು ಮಳೆ ಸುರಿದಿದೆ. ಆಗಸ್ಟ್ ತಿಂಗಳ
ಮಳೆ ಎಷ್ಟು ಎಂಬ ಕುತೂಹಲ ಇದ್ದೇ ಇದೆ. ಪ್ರತಿ ದಿನ ಅಂದರೆ ವರ್ಷದ 365 ದಿನವೂ ಸುರಿಯುವ ಮಳೆಯ ದಾಖಲೆ ಮಾಡುವ ಶ್ರೀಧರ ರಾವ್ ಹೈದಂಗೂರು ಅವರು ಸುರಿದ ಮಳೆಯ ಮಾಹಿತಿ ಈ ವರ್ಷದ ಆಗಸ್ಟ್ ತಿಂಗಳಲ್ಲಿ 778 ಮಿ.ಮೀ ಮಳೆ ಸುರಿದಿದೆ. ಈ ವರ್ಷ ಆ.31ರ ತನಕ 4120 ಮಿ. ಮೀ.ಯಾಗಿದೆ. ಕಳೆದ ಐದು ವರ್ಷದಲ್ಲಿ 2020ರಲ್ಲಿ ಆಗಸ್ಟ್ ತಿಂಗಳಲ್ಲಿ ಅತೀ ಹೆಚ್ಚು ಮಳೆ ಸುರಿದಿತ್ತು. ಅಂದರೆ 1243ಮಿ. ಮೀ ಮಳೆಯಾಗಿತ್ತು. 2022ರಲ್ಲಿ 1033 ಮಿ. ಮೀ ಮಳೆಯಾಗಿತ್ತು. 2021ಆಗಸ್ಟ್ನಲ್ಲಿ 836 ಮಿ. ಮೀ ಮಳೆಯಾದರೆ
2023ಆಗಸ್ಟ್ನಲ್ಲಿ 330ಮಿ. ಮೀ. ಮಳೆ ಸುರಿದಿತ್ತು ಎಂದು
ಶ್ರೀಧರ ರಾವ್ ಮಾಹಿತಿ ನೀಡಿದ್ದಾರೆ.