ಹಾಂಗ್ಝೌ: ಚೀನಾದ ಹಾಂಗ್ಝೌನಲ್ಲಿ ನಡೆದ 19ನೇ ಏಷ್ಯನ್ ಕ್ರೀಡಾಕೂಟ ಮುಕ್ತಾಯವಾಗಿದ್ದು, ವರ್ಣ ರಂಜಿತ ಸಮಾರಂಭದ ಮೂಲಕ ತೆರೆ ಬಿದ್ದಿದೆ. ಸಮಾರೋಪ ಸಮಾರಂಭದಲ್ಲಿ ಕ್ತೀಡಾಪಟುಗಳು ಹಾಗೂ ಸಾಗರೋಪಾದಿಯಲ್ಲಿ ಸಮಾರೋಪದಲ್ಲಿ ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು ಏಷ್ಯಾ ಒಲಿಂಪಿಕ್ ಕೌನ್ಸಿಲ್ನ ಹಂಗಾಮಿ ಅಧ್ಯಕ್ಷ
ರಾಜಾ ರಣಧೀರ್ ಸಿಂಗ್ ಅವರು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡರು. ಕಲಾವಿದರು, ತಂಡಗಳು ವೈವಿಧ್ಯಮಯ ಪ್ರದರ್ಶನ ನೀಡಿದರು.
19ನೇ ಆವೃತ್ತಿಯ ಏಷ್ಯನ್ ಗೇಮ್ಸ್ನಲ್ಲಿ ಭಾರತೀಯ ಅಥ್ಲೀಟ್ಗಳು ಅಸಾಧಾರಣ ಪ್ರದರ್ಶನ ನೀಡಿ ಪದಕಗಳ ಶತಕ ಬಾರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಬಾರಿಯ ಏಷ್ಯನ್ ಗೇಮ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ 655 ಸ್ಪರ್ಧಿಗಳು 107 ಪದಕಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ 107 ಪದಕಗಳಲ್ಲಿ 28 ಚಿನ್ನ, 38 ಬೆಳ್ಳಿ ಮತ್ತು 41 ಕಂಚಿನ ಪದಕಗಳೂ ಸೇರಿವೆ. ಈ ಮೂಲಕ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಅಧಿಕ ಪದಕ ಗೆದ್ದ ತನ್ದೇ ದಾಖಲೆಯನ್ನು ಭಾರತ ಮುರಿದಿದೆ. 2018ರಲ್ಲಿ ಜಕಾರ್ತಾದಲ್ಲಿ 70 ಪದಕಗಳನ್ನು ಗೆದ್ದಿದ್ದರು. ಇದೀಗ ಆ ದಾಖಲೆಯನ್ನು ಭಾರತ ಮುರಿದಿದೆ.