ಅಬುಧಾಬಿ: ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಒಮನ್ ತಂಡದ ವಿರುದ್ಧದ ಯುಎಇ ತಂಡ 42 ರನ್ಗಳ ಗೆಲುವು ದಾಖಲಿಸಿದೆ.ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಯುಎಇ, 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 172 ರನ್ ಪೇರಿಸಿತು. ಯುಎಇ ಪರ ಆರಂಭಿಕರಾದ
ಅಲಿಶನ್ ಶರಫು 51 ಮತ್ತು ನಾಯಕ ಮುಹಮ್ಮದ್ ವಾಸೀಂ 69 ರನ್ ಸಿಡಿಸಿ ತಂಡಕ್ಕೆ ಉತ್ತಮ ಬುನಾದಿ ಹಾಕಿದರು. ಉಳಿದಂತೆ, ಮುಹಮ್ಮದ್ ಜುಹಬ್ 21 ಮತ್ತು ಹರ್ಷಿತ್ ಕೌಶಿಕ್ 19 ರನ್ ಸಿಡಿಸಿದರು.ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಒಮನ್ ತಂಡ ಯುಎಇ ಬೌಲಿಂಗ್ ದಾಳಿಗೆ ತತ್ತರಿಸಿ 18.4 ಓವರ್ಗಳಲ್ಲಿ 130 ರನ್ಗಳಿಗೆ ಆಲೌಟ್ ಆಗುವ ಮೂಲಕ 42 ರನ್ಗಳಿಂದ ಸೋಲೊಪ್ಪಿಕೊಂಡಿತು.
ಒಮನ್ ಪರ ನಾಯಕ ಜತಿಂದರ್ ಸಿಂಗ್ 20, ಆರ್ಯನ್ ಬಿಷ್ಠ 24 ಮತ್ತು ವಿನಾಯಕ ಶುಕ್ಲಾ 20 ರನ್ ಗಳಿಸಿದರು.ಯುಎಇ ಪರ ಜುನೈದ್ 4 ವಿಕೆಟ್, ಹೈದರ್ ಅಲಿ ಮತ್ತು ಮುಹಮ್ಮದ್ ಜವಾದುಲ್ಲಾ ತಲಾ 2 ವಿಕೆಟ್ ಪಡೆದರು.





