ಸುಳ್ಯ: ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುರುವ
ಜನಸಾಮಾನ್ಯರನ್ನು ಸಂಕಷ್ಟಕ್ಕೆ ತಳ್ಳುವ ಆಡಳಿತ ವ್ಯವಸ್ಥೆಯಿಂದ ಬೇಸತ್ತಿರುವ ಸುಳ್ಯ ಕ್ಷೇತ್ರದ ಮತದಾರರು ಈ ಸಲ ಹೊಸ ರಾಜಕೀಯ ವ್ಯವಸ್ಥೆಯನ್ನು ಬೆಂಬಲಿಸಲಿದ್ದಾರೆ ಎಂದು ಆಮ್ ಆದ್ಮ ಪಕ್ಷದ ಜಿಲ್ಲಾಧ್ಯಕ್ಷ ಅಶೋಕ್ ಅಡಮಲೆ ಹೇಳಿದರು. ಗುತ್ತಿಗಾರು ಹಾಗು ನಿಂತಿಕಲ್ಲಿನಲ್ಲಿ ನಡೆದ ಸುಳ್ಯ ಕ್ಷೇತ್ರದ
ಆಮ್ ಪಕ್ಷದ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಸುಮನಾ ಸುಶಿಕ್ಷಿತ ಸಮರ್ಥ ಅಭ್ಯರ್ಥಿ ಅವರಿಗೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವಿದೆ. ಅದನ್ನು ಪರಿಹರಿಸುವ ಚಿಂತನೆ ಮತ್ತು ಯೋಜನೆಯಿದೆ, ಅದನ್ನು ಸರ್ಕಾರಿ ಆಡಳಿತದ ಮಟ್ಟದಲ್ಲಿ ಸಮರ್ಥವಾಗಿ ಮಂಡಿಸಿ ಅನುಷ್ಠಾನಗೊಳಿಸುವ ಸಾಮರ್ಥ್ಯವಿದೆ. ಈ ಬಾರಿಯ ಚುನಾವಣೆಯಲ್ಲಿ ಆಮ್ ಆದ್ಮ ಪಕ್ಷದ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಅವರ ವಿಜಯ ಶತಸಿದ್ಧ ಆ ಮೂಲಕ ಕ್ಷೇತ್ರದ ಅಭಿವೃದ್ಧಿ ಪರ್ವಕ್ಕೆ ನಾಂದಿಯಾಗಲಿದೆ ಎಂದು ಅವರು ಹೇಳಿದರು.ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಮಾತನಾಡಿದರು. ಆಮ್ ಆದ್ಮಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.