ಸುಳ್ಯ:ಚುನಾವಣಾ ಸಂದರ್ಭದಲ್ಲಿ ಕೋವಿ ಪರವಾನಿಗೆದಾರರು ತಮ್ಮ ಕೋವಿಗಳನ್ನು ಪೊಲೀಸ್ ಠಾಣೆಯಲ್ಲಿ ಅಥವಾ ಹತ್ತಿರದ ಮದ್ದು ಗುಂಡು ವ್ಯಾಪಾರಿಗಳಲ್ಲಿ ಡೆಪಾಸಿಟ್ ಮಾಡಬೇಕೆಂಬ ಆದೇಶದಿಂದ ರೈತರಿಗೆ ವಿನಾಯಿತಿ ನೀಡಬೇಕು ಎಂದು ಕೃಷಿಕರು ಒತ್ತಾಯಿಸಿದ್ದಾರೆ. ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ಸಭೆ ನಡೆಸಿದ ಸುಮಾರು ನೂರಕ್ಕೂ ಅಧಿಕ
ರೈತರು ಈ ಬಗ್ಗೆ ಚರ್ಚೆ ನೆಡಸಿದರು. ಪ್ರತಿ ಚುನಾವಣೆಯ ಸಂದರ್ಭದಲ್ಲೂ ಕೋವಿ ಡೆಪಾಸಿಟ್ ಆದೇಶ ಮಡಲಾಗುತ್ತದೆ. ಇದರಿಂದ ತಿಂಗಳುಗಳ ಕಾಲ ರೈತರು ತಮ್ಮ ಕೋವಿಗಳನ್ನು ಡೆಪಾಸಿಟ್ ಮಾಡಬೇಕಾದ ಪರಿಸ್ಥಿತಿ ಬರುತ್ತಿದೆ.ಈ ಕ್ರಮವನ್ನು ಬದಲಾಯಿಸಬೇಕು. ಕ್ರಿಮಿನಲ್ ಹಿನ್ನಲೆಯುಳ್ಳವರಿಂದ ಮಾತ್ರ ಕೋವಿ ಡೆಪಾಸಿಟ್ ಪಡೆದು ಇತರ ರೈತರಿಗೆ ಕೋವಿ ಡಿಪಾಸಿಟ್ ಮಾಡುವುದರಿಂದ ವಿನಾಯಿತಿ ನೀಡಬೇಕು ಎಂದು ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಬಳಿಕ ಈ ಬೇಡಿಕೆಯನ್ನು ಮುಂದಿಟ್ಟು ಸುಳ್ಯ ತಾಲೂಕು ಕಚೇರಿಯಲ್ಲಿ ಸಹಾಯಕ ಚುನಾವಣಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು. ತಾಲೂಕಿನ ವಿವಿಧ ಭಾಗಗಳಿಂದ ಕೃಷಿಕರು ಆಗಮಿಸಿದ್ದರು.








