ಶಿರೂರು: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾಗಿದ್ದ ಕೇರಳದ ಕೋಯಿಕ್ಕೋಡ್ ಮೂಲಕ ಅರ್ಜುನ್ ಚಲಾಯಿಸಿದ್ದ ಲಾರಿ ಪತ್ತೆಯಾಗಿದೆ. ಲಾರಿಯ ಕ್ಯಾಬಿನ್ ಒಳಗೆ
ಅರ್ಜುನ್ ಮೃತದೇಹ ಪತ್ತೆಯಾಗಿದೆ. ಲಾರಿ ತನ್ನದೇ ಎಂದು ಲಾರಿಯ ಮಾಲಕ ಮನಾಫ್ ಗುರುತಿಸಿದ್ದಾರೆ. ಜುಲೈ16 ರಂದು ನಡೆದ ಗುಡ್ಡ ಕುಸಿತದಲ್ಲಿ ಅರ್ಜುನ್ ಸೇರಿ 11 ಮಂದಿ ನಾಪತ್ತೆಯಾಗಿದ್ದರು. ಇದೀಗ ಡ್ರಜ್ಜಿಂಗ್ ಯಂತ್ರ ಬಳಸಿ ಗಂಗಾವಳಿ ನದಿಯಲ್ಲಿ ನಡೆಸಲಾದ ಮೂರನೇ ಹಂತದ ಕಾರ್ಯಾಚರಣೆಯಲ್ಲಿ ಲಾರಿ ಪತ್ತೆಯಾಗಿದೆ. ಮೃತದೇಹ ಭಾಗಗಳನ್ನು ಲಾರಿಯ ಕ್ಯಾಬಿನ್ನಿಂದ ಹೊರ ತೆರೆಯಲಾಗಿದೆ. 72 ದಿನಗಳ ಬಳಿಕ ಇದೀಗ ಅರ್ಜುನ್ ಹಾಗೂ ಲಾರಿ ಪತ್ತೆಯಾಗಿದೆ. ಕಳೆದ 6 ದಿನಗಳಿಂದ ನಡೆಸಿದ ಕಾರ್ಯಾಚರಣೆಯಲ್ಲಿ ನದಿಯಲ್ಲಿ ಹಲವು ಪಾಯಿಂಟ್ಗಳನ್ನು ಗುರುತು ಹಚ್ಚಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.