ಚೇರಂಬಾಣೆ:ಮಕ್ಕಳು ಮತ್ತು ಯುವ ಜನತೆಯಲ್ಲಿ ಅರೆಭಾಷೆ ಮತ್ತು ಸಂಸ್ಕೃತಿಯ ಒಲವು ಮೂಡಿಸಿದರೆ ಭಾಷೆಯ ಉಳಿವು ಮತ್ತು ಬೆಳವಣಿಗೆ ಸಾಧ್ಯ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯೆ ಚಂದ್ರಾವತಿ ಬಡ್ಡಡ್ಕ ನುಡಿದರು. ಅವರು ಚೇರಂಬಾಣೆಯಲ್ಲಿ ಅರೆಭಾಷಿಕ ಮಕ್ಕಳಿಗಾಗಿ
ಹಮ್ಮಿಕೊಂಡ ‘ಕಥೆ ಬರೆಮೊ ಬನ್ನಿ’ ಎಂಬ ಅರೆಭಾಷಾ ಕಥೆ ರಚನಾ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅರೆಭಾಷೆ ಅಕಾಡೆಮಿ ವತಿಯಿಂದ ಚೇರಂಬಾಣೆಯ ಗೌಡ ಸಮಾಜ ಮತ್ತು ಗೌಡ ಮಹಿಳಾ ಒಕ್ಕೂಟಗಳ ಸಹಯೋಗದಲ್ಲಿ ನಡೆದ ಕಾರ್ಯಾಗಾರವನ್ನು ಗೌಡ ಸಮಾಜದ ಅಧ್ಯಕ್ಷ ಕೊಡಪಾಲ ಗಣಪತಿ ಉದ್ಘಾಟಿಸಿದರು. ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಅಕಾಡೆಮಿ ಸದಸ್ಯ ವಿನೋದ್ ಮೂಡಗದ್ದೆ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತಿ ಬಾರಿಯಂಡ ಜೋಯಪ್ಪ ಹಾಗೂ ಡಾ. ಪುನೀತ್ ರಾಘವೇಂದ್ರ ಕುಂಟುಕಾಡು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಗೌಡ ಸಮಾಜದ ನಿರ್ದೇಶಕಿ ನೆಯ್ಯಣಿ ಹೇಮಲತಾ, ಗೌಡ ಮಹಿಳಾ ಒಕ್ಕೂಟದ ಕೂಡಕಂಡಿ ಸೋನಿ ಸುದೀಪ್, ಕೇಕಡ ಪೂಜ ನಾಗೇಂದ್ರ, ಬೈಚನ ಸ್ವಾತಿ ಮಂದಪ್ಪ, ಕೊಡಪಾಲು ತೀರ್ಥ ಗಣಪತಿ, ಹೊಸೊಕ್ಲು ಲತಾ ಮೊಣ್ಣಪ್ಪ, ಪುದಿನೆರವನ ವೀಣಾ ವೆಂಕಟೇಶ್, ನೈಯೆಣಿ ಶಾಂತಿ ಅರ್ಜುನ ಮತ್ತಿತರರು ಉಪಸ್ಥಿತರಿದ್ದರು.





