ಸುಳ್ಯ:ಯೋಗೀಶ್ ಹೊಸೋಳಿಕೆ ಸಂಪಾದಕತ್ವದಲ್ಲಿ ಮದುವೆ ಕುರಿತ ಅರೆಭಾಷೆ ಕೃತಿ ಹೊಸೋಳಿಕೆ ಕಟ್ಟೆಮನೆ ದೈವಸ್ಥಾನದಲ್ಲಿ ನಡೆದ ದೀಪಾವಳಿ ಆಚರಣೆ ಸಂದರ್ಭದಲ್ಲಿ ಬಿಡುಗಡೆಗೊಂಡಿತು. ಯೋಗೀಶ್ ಹೊಸೋಳಿಕೆ ಹಾಗೂ ಜಯಶ್ರೀ ಹೊಸೋಳಿಕೆಯವರ ಮದುವೆ ಕವಿಗೋಷ್ಠಿ, ಅರೆಭಾಷೆ
ಪುಣ್ಯಕೋಟಿ ಪುಸ್ತಕ ಬಿಡುಗಡೆ, ಅರೆಭಾಷೆ ಮದುವೆ ಕಾಗದ, ಸಂಪ್ರದಾಯಬದ್ಧ ಮದುವೆ 1100 ಕ್ಕಿಂತಲೂ ಹೆಚ್ಚಿನ ಪುಸ್ತಕ ಒಂದೇ ದಿನ ವಿತರಣೆ ಹೀಗೆ ಹಲವು ದಾಖಲೆಗಳನ್ನು ಸಾಹಿತಿ ಯೋಗೀಶ್ ಹೊಸೋಳಿಕೆ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ.ಕಿರಣ ರಂಗ ಅಧ್ಯಯನ ಸಂಸ್ಥೆ ಗುತ್ತಿಗಾರು ಈ ಪುಸ್ತಕ ಪ್ರಕಟಿಸಿದ್ದು, ಕುಟುಂಬದ ಹಿರಿಯರಾದ ವಿಶ್ವನಾಥ್ ಹೊಸೋಳಿಕೆ ಪುಸ್ತಕ ಬಿಡುಗಡೆಗೊಳಿಸಿದರು. ಕುಟುಂಬದ ಅಧ್ಯಕ್ಷ ಎಚ್.ಬಿ ಕೇಶವ ಹೊಸೋಳಿಕೆ ಅಧ್ಯಕ್ಷತೆ ವಹಿಸಿದ್ದರು. ಕಿರಣ ರಂಗ ಸಂಸ್ಥೆಯ ಅಧ್ಯಕ್ಷ ಪುಸ್ತಕ ಸಂಪಾದಕ ಯೋಗೀಶ್ ಹೊಸೋಳಿಕೆ, ಜಯಶ್ರೀ ಯೋಗೀಶ್ ಹೊಸೋಳಿಕೆ, ವಿದ್ವತ್ ವೈ ಹೊಸೋಳಿಕೆ, ಕುಟುಂಬದ ಮುಖ್ಯಸ್ಥರಾದ ಎಚ್.ಬಿ ತೀರ್ಥರಾಮ ಹೊಸೋಳಿಕೆ, ರಾಧಾಕೃಷ್ಣ ಹೊಸೋಳಿಕೆ, ಕುಟುಂಬದ ಮುಖ್ಯಸ್ಥರಾದ ಎಚ್.ಬಿ ಚಂದ್ರಶೇಖರ ಹೊಸೋಳಿಕೆ, ರವೀಂದ್ರ ಹೊಸೋಳಿಕೆ ಮತ್ತಿತರರು ಉಪಸ್ಥಿತರಿದ್ದರು.









