ಸುಳ್ಯ: ಅಡಿಕೆ ದರ ಪಾತಾಳಕ್ಕೆ ಇಳಿದರೂ ಯಾವ ಜನಪ್ರತಿನಿಧಿಯೂ ಸಹಾಯಕ್ಕೆ ಬಾರದೆ ಇರುವುದು ದುರದೃಷ್ಟಕರ ಎಂದು ಕಾಂಗ್ರೆಸ್ ಮುಖಂಡ ಎಂ ವೆಂಕಪ್ಪ ಗೌಡ ಕಳವಳ ವ್ಯಕ್ತಪಡಿಸಿದ್ದಾರೆ. ಈಗ ರೈತನು ಬೆಳೆದ ಅಡಿಕೆಯನ್ನು ಮಾರಾಟ ಮಾಡುವ ಸಮಯ ,ಕಳೆದ ವರ್ಷ ಈ ವೇಳೆಗೆ ಹೊಸ ಅಡಿಕೆ ದರ 400/ ಅದರೆ ಈಗ ಅದೇ ಅಡಿಕೆ ದರ
325 ರಿಂದ 350_= ಸಿಂಗಲ್ ಚೋಲ್ ಅಡಿಕೆ ಅಂದು 490/= ಇಂದು 405/= ಅದೇ ರೀತಿ ಡಬ್ಬಲ್ ಚೋಲ್ ಅಡಿಕೆ ಅಂದು 530/= ಇಂದು 430/= ,ಸರಾಸರಿ 100 ರೂಪಾಯಿಯಷ್ಟು ವೆತ್ಯಾಸ ಬಂದಿದೆ ಹಾಗಿದ್ದರೆ ಇದಕ್ಕೆ ಏನು ಕಾರಣ ಅಂತ ಅಡಿಕೆ ವ್ಯಾಪಾರಿಗಳ ಕೇಳಿದರೆ, ಅದಕ್ಕೆ ಉತ್ತರ ವಿದೇಶದಿಂದ ಕಳ್ಳ ಮಾರ್ಗವಾಗಿ ಬರುತ್ತಿರುವ ವಿದೇಶಿ ಅಡಿಕೆ ನಮ್ಮ ದೇಶದ ಅಡಿಕೆ ಮಾರುಕಟ್ಟೆಯಲ್ಲಿ ಹರಿದಾಡುತ್ತಿದ್ದು ಇದರ ತಡೆಯದಿರುವುದೇ ಮುಖ್ಯ ಕಾರಣ ಅಗಿದೆ ಅಂತ ಅವರ ಉತ್ತರ ಸಿಗುತಿದೆ. ಇದನ್ನು ತಡೆಯಲು ಕೇಂದ್ರ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ. ಸಂಸದರು ಈ ಬಗ್ಗೆ ಸಂಸತ್ನಲ್ಲಿ ಧ್ವನಿ ಎತ್ತಬೇಕು
ಎಂದರು. ಪತ್ರಿಕೆಗಳಲ್ಲಿ ಅಡಿಕೆಯ ಧಾರಣೆಯನ್ನು ಪ್ರಕಟ ಪಡಿಸುತ್ತಾರೆ. ಪತ್ರಿಕೆಯಲ್ಲಿ ಪ್ರಕಟವಾದ ಅಡಿಕೆ ದರಗಳು ವಾಸ್ತವದಲ್ಲಿ ಸಿಗದ ಪರಿಸ್ಥಿತಿ ಇದೆ. ಪತ್ರಿಕೆಗಳಲ್ಲಿ ಹಳೆ ಅಡಿಕೆ (ಡಿ ) 460-485, ಹಳೆ ಅಡಿಕೆ (ಸಿ )430-435, ಹೊಸ ಅಡಿಕೆ 325-365ವಾಸ್ತವವಾಗಿ ರೈತನೊಬ್ಬ ಅಡಿಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿದಾಗ ಪತ್ರಿಕೆಯಲ್ಲಿದ್ದ ದರವನ್ನು ರೈತರಿಗೆ ಸಿಗದ ಸ್ಥಿತಿ ಇದೆ. ಆದರೆ ಈ ಬಗ್ಗೆ ಯಾವುದೇ ಜನಪ್ರತಿಗಳು ಮಾತನಾಡದೇ ಇರುವುದು ಸರಿಯಲ್ಲ ಎಂದು ವೆಂಕಪ್ಪ ಗೌಡ ಹೇಳಿದ್ದಾರೆ.












