ಸುಳ್ಯ:ಅಡಿಕೆ ಮರಗಳಿಗೆ ಮತ್ತು ತೆಂಗಿನ ಮರಕ್ಕೆ ಹುಳ ಮತ್ತು ಕೀಟ ಭಾದೆ ಕಾಣಿಸಿಕೊಂಡಿದ್ದು ಕೃಷಿಕರು ಆತಂಇಕ್ಕೆ ಸಿಲುಕಿದ್ದಾರೆ. ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಕೂಡಲೇ ಸ್ಪಂದಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಒತ್ತಾಯಿಸಿದ್ದಾರೆ. ಸುಳ್ಯ ಹಾಗೂ ಕಡಬ ತಾಲೂಕಿನ ಕೆಲವು
ಕಡೆಗಳಲ್ಲಿ ಹುಳಗಳು,ಕೀಟಗಳು ಅಡಿಕೆ ಮರಗಳ ತುದಿ ಭಾಗವನ್ನು ಕೊರೆದು ರಂಧ್ರಗಳನ್ನು ಮಾಡಿ ಮರದ ಸಿರಿಗಳನ್ನು ತಿನ್ನುವ ಮುಖಾಂತರ ಒಂದೆರಡು ವಾರದಲ್ಲಿ ಮರಗಳು ಸಾಯುತ್ತಿರುವ ದೃಶ್ಯ ಕಂಡು ಬಂದಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಹಾಗೂ ನಮ್ಮ ಜನಪ್ರತಿನಿಧಿಗಳು ತಕ್ಷಣ ಸ್ಪಂದಿಸಬೇಕು.
ಸುಳ್ಯ ತಾಲೂಕಿನಲ್ಲಿ ಅಡಿಕೆ ಕೃಷಿಗೆ ಹಳದಿ ರೋಗ, ಎಲೆ ಚುಕ್ಕಿ ರೋಗಗಳಿಗೆ ತುತ್ತಾಗಿ ಬಹುತೇಕ 70% ಕೃಷಿಕರು ತಮ್ಮ ಅಡಿಕೆ ತೋಟ ಕಳೆದುಕೊಂಡಿದೆ.ಆದರೂ ಯಾವ ಸರ್ಕಾರಗಳು ಅದರ ಪರಿಹಾರಕ್ಕೆ ಯಾವ ಪ್ರಯತ್ನವೂ ನಡೆಸಿಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.





