ಅರಂತೋಡು:ಅರಂತೋಡು ಗ್ರಾಮ ಪಂಚಾಯತ್ ಮತ್ತು ಬ್ಯಾಂಕ್ ಆಫ್ ಬರೋಡ ಅರಂತೋಡು ಶಾಖೆಯ ಪ್ರಾಯೋಜಕತ್ವದಲ್ಲಿ ಕೇಂದ್ರ ಸರಕಾರದ ಯೋಜನೆಗಳನ್ನು ಪ್ರಚುರಪಡಿಸುವ ವಿಕಸಿತ ಭಾರತ ಸಂಕಲ್ಪ ಯಾತ್ರಾ ಕಾರ್ಯಕ್ರಮ ಅರಂತೋಡು ಗ್ರಾಮ ಪಂಚಾಯತ್ ಅಮೃತಸ ಭಾಂಗಣದಲ್ಲಿ ಜರುಗಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮವನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಪ್ರಾಂಶುಪಾಲ ಕೆ.ಆರ್. ಗಂಗಾಧರ ಕುರುಂಜಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರಕಾರದ
ಪ್ರಗತಿಯನ್ನು ಅಂಕಿ ಅಂಶಗಳ ಮುಖಾಂತರ ವಿವರಿಸಿದರು.
ಆರಂತೋಡು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಸಾರುವ ನೃತ್ಯ ಪ್ರದರ್ಶನವನ್ನು ಮಾಡಿದರು. ಸಭೆಯಲ್ಲಿ ಅರಂತೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದ್ಯಮ, ಕ್ಷೇತ್ರದ ಹರಿಶ್ಚಂದ್ರ ಹೊದ್ದೆಟ್ಟಿ, ಜೇನು ಕೃಷಿ, ಕ್ಷೇತ್ರದಲ್ಲಿ ಸಾಧನೆ ಮಾಡಿದ ಸೀತಾರಾಮ ಪಿಂಡಿಮನೆ ಅವರನ್ನು ಗೌರವಿಸಲಾಯಿತು.
ಬ್ಯಾಂಕ್ ಆಫ್ ಬರೋಡ ಮುದ್ರಾ ಯೋಜನೆಯ ಫಲಾನುಭವಿಗಳಿಗೆ ಸಾಲದ ಚೆಕ್ ವಿತರಣೆ, ಹಾಗೂ ಅರಂತೋಡು ಸಹಕಾರಿ ಸಂಘದ ಕೃಷಿಕ ಫಲಾನುಭವಿಗಳಿಗೆ ಕೃಷಿ ಅಭಿವೃದ್ಧಿಸಾಲದ ಚೆಕ್ ವಿತರಣೆ ನಡೆಯಿತು, ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ನವೋದಯ ಸ್ವ ಸಹಾಯ ಸಂಘಗಳ 2ಸಂಘಗಳನ್ನು ಫಲಕ ನೀಡಿ ಗುರುತಿಸಲಾಯಿತು. ಗ್ರಾಮ ಪಂಚಾಯತ್ 25 ಶೇಕಡ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ, ವಿಕಲಚೇತನ ಫಲಾನುಭವಿಗಳಿಗೆ, ನೀರಿನ ಟ್ಯಾಂಕ್, ಮಲಗುವ ಮಂಚ, ಗೋದ್ರೆಜ್ ಸೌಲಭ್ಯಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

ಅರಂತೋಡು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಉಪಸ್ಥಿತರಿದ್ದರು, ಬ್ಯಾಂಕ್ ಆಫ್ ಬರೋಡ ಆರಂತೋಡು ಶಾಖೆಯ ಪ್ರಬಂಧಕ ಸತೀಶ್ ಕುಮಾರ್ ಸ್ವಾಗತಿಸಿದರು ಆರಂತೋಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಎಂ ಆರ್ ಜಯಪ್ರಕಾಶ್ ಕೇಂದ್ರ ಸರಕಾರದ ಯೋಜನೆಗಳ ವಿವರ ನೀಡುವುದರೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರಂತೋಡು ತೆಕ್ಕಿಲ್ ಹೆಚ್ ಪಿ ಗ್ಯಾಸ್ ಏಜೆನ್ಸಿಯ ವ್ಯವಸ್ಥಾಪಕ ಧನುರಾಜ್ ಊರುಪಂಜ ಮತ್ತು ಆರಂತೋಡು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರೇಷ್ಮಾ ಜಿ. ಇ ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಭವಾನಿ ಚಿಟ್ಟನೂರು ವಂದಿಸಿದರು, ಕಾರ್ಯಕ್ರಮಕ್ಕೆ ಅರಂತೋಡು ಬ್ಯಾಂಕ್ ಆಫ್ ಬರೋಡ, ಮತ್ತುಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು. ವಿಕಸಿತ ಸಂಕಲ್ಪ ಯಾತ್ರೆ ರಥದ ಬಳಿ ಆರಂತೋಡು ತೆಕ್ಕಿಲ್ ಹೆಚ್ ಪಿ ಗ್ಯಾಸ್ ಏಜೆನ್ಸಿಯವರು ಕಿಯೋಸ್ಕ್ ಮೂಲಕ ಉಜ್ಜಲ ಯೋಜನೆ ಮಾಹಿತಿಯನ್ನು ಗ್ರಾಮಸ್ಥರೀಗೆ ನೀಡಿದರು.









