ಅರಂತೋಡು: ಅರಂತೋಡು ಮತ್ತು ತೊಡಿಕಾನ ಭಾಗದಲ್ಲಿ ಕೆಲವು ದಿನಗಳಿಂದ ರಾತ್ರಿ ಹೊತ್ತಿನಲ್ಲಿ ನಿರಂತರವಾಗಿ ವಿದ್ಯುತ್ ಕಡಿತವಾಗುತ್ತದೆ. ಇದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ನೌಕರುಗಳಿಗೆ ತೊಂದರೆಯಾಗುತ್ತದೆ. ಇದನ್ನು ಕೂಡಲೆ ಸರಿಪಡಿಸಬೇಕೆಂದು ಅರಂತೋಡು ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಅಶ್ರಪ್ ಗುಂಡಿ ಯವರು ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಸಂಜೆಯಾಗುತ್ತಲೆ
ಪ್ರತ್ಯಕ್ಷಗೊಳ್ಳುವ ವಿದ್ಯುತ್ ರಾತ್ರಿ ಹೊತ್ತಿನಲ್ಲಿ ಮಾಯವಾಗುತ್ತದೆ. ತಾಂತ್ರಿಕ ಕಾರ್ಯಕ್ಷಮತೆಯನ್ನು ನಿರ್ವಹಣೆ ಮಾಡಿ ವಿದ್ಯುತ್ ಅಡಚಣೆಯನ್ನು ಕನಿಷ್ಟ ಮಟ್ಟಕ್ಕೆ ತರಬೇಕು ಮತ್ತು ರಾತ್ರಿ ಹೊತ್ತಿನಲ್ಲಿ ನಿರ್ವಹಣೆ ಮಾಡಲು ಮಾನ್ಸೂನ್ ಗ್ಯಾಂಗ್ ಮ್ಯಾನ್ ಗಳ ಪಡೆಯನ್ನು ಸಜ್ಜುಗೊಳಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ಅಲ್ಲದೆ ಅರಂತೋಡು ಮತ್ತು ತೊಡಿಕಾನ ಗ್ರಾಮದ ವಿದ್ಯುತ್ ಸರಬರಾಜಿನಲ್ಲಿ ಆಗುತ್ತಿರುವ ತೊಂದರೆಗಳನ್ನು ನಿವಾರಿಸಿ ನಿರಂತರ ಉತ್ತಮ ಗುಣಮಟ್ಟದ ವಿದ್ಯುತ್ ನ್ನು ನೀಡಲು ಕ್ರಮ ಕೈಗೊಳ್ಳಬೇಕು ಮತ್ತು ಅರಂತೋಡಿನಲ್ಲಿ ವಿದ್ಯುತ್ ಅದಾಲತ್ತನ್ನು ಕರೆಯಲು ಕ್ರಮ ಕೈಗೊಳ್ಳಬೇಕೆಂದು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಅವರಿಗೂ ಅಶ್ರಪ್ ಗುಂಡಿ ಮನವಿ ಸಲ್ಲಿಸಿದ್ದರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ವೆಂಕಟರಮಣ ಪೆತ್ತಾಜೆ, ಧನುರಾಜ್ ಊರುಪಂಜ ಉಪಸ್ಥಿತರಿದ್ದರು.