ಅರಂತೋಡು:ಅರಂತೋಡು ಗ್ರಾಮಪಂಚಾಯತಿ ವತಿಯಿಂದ ಜಲ್ ಅರ್ಪಣ್ ದಿವಸ್ ಆಚರಣೆ ಮತ್ತು ಗ್ರಾಮ ಪಂಚಾಯತ್ ಕಲಿಕಾ ಕೇಂದ್ರ ಹಾಗೂ ಸುಸಜ್ಜಿತ ಅಭಿಲೇಖಾಲಯ(ದಾಖಲೆ ಕೊಠಡಿ)ಗಳ
ಉದ್ಘಾಟನೆ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಅರಂತೋಡು- ತೊಡಿಕಾನ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ ಮತ್ತಿತರರು ಭಾಗವಹಿಸಿದ್ದರು.







