ಅರಂತೋಡು:ಗ್ಯಾರಂಟಿ ಯೋಜನೆಯ ಅರ್ಹ ಪಲಾನುಭವಿಗಳನ್ನು ಹಾಗೂ ತಿರಸ್ಕೃತಗೊಂಡ ಪಲಾನುಭವಿಗಳನ್ನು ಗುರುತಿಸಿ, ಪರಿಶೀಲನೆ ನಡೆಸಿ ಅರ್ಹ ಪಲಾನುಭವಿಗಳಿಗೆ ಯೋಜನೆಗಳನ್ನು ದೊರಕುವಂತೆ ಮಾಡುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರ ಉಸ್ತುವಾರಿಯಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಹಮ್ಮಿಕೊಂಡ ವಿಲೇವಾರಿ ಶಿಬಿರ ಆರಂತೋಡು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ
ನಡೆಯಿತು. ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಅಧ್ಯಕ್ಷತೆ ವಹಿಸಿ ಮಾತನಾಡಿ ಸರಕಾರದ ಯೋಜನೆಗಳು ಪ್ರತಿಯೊಬ್ಬ ಪಲಾನುಭವಿಗಳಿಗೂ ದೊರಕುವಂತಾಗಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳಾದ ನಾವು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಪಕ್ಷ ಬೇಧ ಮರೆತು ಯೋಜನೆಗಳನ್ನು ಜನರ ಬಳಿಗೆ ತಲುಪಿಸಬೇಕು ಎಂದು ಹೇಳಿದರು.
ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಅನುಷ್ಠಾನ ಸಮಿತಿಯ ಸದಸ್ಯ ಕಾರ್ಯದರ್ಶಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹನಾಧಿಕಾರಿ ರಾಜಣ್ಣ, ರಾಜು ನೆಲ್ಲಿಕುಮೇರಿ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ವಿಜೇಶ್ ಹಿರಿಯಡ್ಕ, ಭವಾನಿಶಂಕರ್ ಕಲ್ಮಡ್ಕ, ಲತೀಫ್ ಅಡ್ಕಾರು, ಧನುಷ್ ಕುಕ್ಕೇಟಿ, ಕೇಶವ ಕೊಳಲು ಮೂಲೆ, ತಿಮ್ಮಯ್ಯ ಗೌಡ ತೋಡಿಕಾನ, ಪಂಚಾಯತ್ ಸದಸ್ಯ ರವೀಂದ್ರ ಪೂಜಾರಿ, ಜುಬೆರ್ ಅರಂತೋಡು, ತಾಜುದ್ದೀನ್ ಅರಂತೋಡು ಸೇರಿದಂತೆ ಪಲಾನುಭವಿಗಳು, ಗ್ಯಾರಂಟಿ ಯೋಜನೆಗಳಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಸ್ವಾಗತಿಸಿದರು.