ಅರಂಬೂರು: ಅರಂಬೂರು ಘಟಕ ಗೌಡ ಸಮಿತಿ ವತಿಯಿಂದ ‘ಆಟಿಲಿ ಒಂದ್ ದಿನ’ಕಾರ್ಯಕ್ರಮ ಅರಂಬೂರಿನ ಮೂಕಾಂಬಿಕಾ ಭಜನಾ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ವಾಸುದೇವ ಗೌಡ ಕುಡೆಕಲ್ಲು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಅರಂಬೂರು ಗೌಡ ಪುರುಷ ಘಟಕದ ಅಧ್ಯಕ್ಷ ಮನೋಹರ ಅರಂಬೂರು ವಹಿಸಿದ್ದರು.ಆಲೆಟ್ಟಿ ಗ್ರಾಮ ಗೌಡ ಸಮಿತಿಯ ಅಧ್ಯಕ್ಷ ಸತೀಶ್ ಕೊಯಿಂಗಾಜೆ, ಆಲೆಟ್ಟಿ ಗ್ರಾಮ ಗೌಡ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಕೋಲ್ಚಾರು, ಯಶೋಧ ಪದ್ಮಯ್ಯ ಉಪಸ್ಥಿತರಿದ್ದರು.
ಸಂಜನಾ ಬದಿಕಾನ ಪ್ರಾರ್ಥಿಸಿ, ತೇಜಸ್ ಚಿದ್ಗಲ್ ಸ್ವಾಗತಿಸಿ, ಅರಂಬೂರು ಗೌಡ ಮಹಿಳಾ ಘಟಕದ ಅಧ್ಯಕ್ಷೆ ಡಾ.ಅನುರಾಧಾ ಕುರುಂಜಿ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯದರ್ಶಿ ವೇದಾವತಿ ನೆಡ್ಚಿಲು ವಂದಿಸಿದರು. ಅಶೋಕ ಪೀಚೆ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ಸುಳ್ಯ ಗೌಡ ಯುವ ನೇವಾ ಸಂಘದ ಉಪಾಧ್ಯಕ್ಷ ಯತಿರಾಜ್ ಭೂತಕಲ್ಲು ಅತಿಥಿಯಾಗಿದ್ದರು.ಅರಂಬೂರು ಗೌಡ ಪುರುಷ ಘಟಕದ ಅಧ್ಯಕ್ಷ ಮನೋಹರ ಅರಂಬೂರು, ಮಹಿಳಾ ಘಟಕದ ಅಧ್ಯಕ್ಷೆ ಡಾ.ಅನುರಾಧಾ ಕುರುಂಜಿ, ಮೂಕಾಂಬಿಕಾ ಭಜನಾ ಮಂದಿರದ ಅಧ್ಯಕ್ಷ ಪರಮೇಶ್ವರ ನೆಡ್ಚಿಲ್ ಉಪಸ್ಥಿತರಿದ್ದರು. ಹಾರಾವತಿ ಕುಡೆಕಲ್ಲು ಸ್ವಾಗತಿಸಿ, ಗಂಗಾಧರ ನೆಡ್ಚಿಲ್ ವಂದಿಸಿ, ರಾಜೀವಿ ಜನಾರ್ದನ ಪಾಲಡ್ಕ ಕಾರ್ಯಕ್ರಮ ನಿರೂಪಿಸಿದರು. ಚಂದ್ರಾವತಿ ಬದಿಕಾನ ಮತ್ತು ಪುಷ್ಪಾವತಿ ಕುಡೆಕಲ್ಲು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು .





