ಸುಳ್ಯ:ಸುಳ್ಯ ತಾಲೂಕಿನ ಅರಂತೋಡು ಮತ್ತು ಮರ್ಕಂಜ ಗ್ರಾಮ ಸಂಪರ್ಕಿಸುವ ಅರಮನೆಗಯ ಸೇತುವೆಗೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಬಹುಬೇಡಿಕೆಯ ಈ ಸೇತುವೆಗೆ ಗುದ್ದಲಿಪೂಜೆ ನೆರವೇರಿಸಿರುವುದು ಸಂತಸ ತಂದಿದೆ.ಆದಷ್ಟು ಬೇಗ ಕಾಮಗಾರಿ ಪೂರ್ತಿಗೊಂಡು ಸೇತುವೆ ಜನರ ಸಂಚಾರಕ್ಕೆ
ತೆರೆದುಕೊಳ್ಳಲಿ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಹೊಸೊಳಿಕೆ ಪ್ರಮುಖರಾದ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ವಿನಯ್ ಮುಳುಗಾಡು, ಎಲ್ಯಣ್ಣ ಅರಮನೆಗಯ, ಸುಬೋದ್ ಶೆಟ್ಟಿ ಮೇನಾಲ,ಸಂತೋಷ್ ಕುತ್ತಮೊಟ್ಟೆ, ದಯಾನಂದ ಕುರುಂಜಿ,ಗೋವಿಂದ ಅಳವುಪಾರೆ, ಶ್ರೀಕಾಂತ್ ಮಾವಿನಕಟ್ಟೆ, ಶಶಿಕಲಾ ಎ ನೀರಬಿದರೆ, ಕುಸುಮಾಧರ ಎ ಟಿ, ವಿನಯ ಕುಮಾರ್ ಕಂದಡ್ಕ, ಸತೀಶ್ ನಾಯ್ಕ್ , ಪ್ರದೀಪ್ ಮನವಳಿಕೆ , ಹೊನ್ನಪ್ಪ ಮಾಸ್ತರ್, ಲೋಕೋಪಯೋಗಿ ಎಂಜಿನಿಯರ್ಗಳಾದ ಕೆ.ಗೋಪಾಲ್ , ಪರಮೇಶ್ವರ, ಗುತ್ತಿಗೆದಾರ ಆಕಾಶ್ ಸೇರಿದಂತೆ ನಾಗರಿಕರು ಉಪಸ್ಥಿತರಿದ್ದರು.
ಕೇಶವ ಅಡ್ತಲೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಗೋವಿಂದ ಅಳವುಪಾರೆ ವಂದಿಸಿದರು.ಅರಮನೆಗಯ ಸಂಪರ್ಕ ಸೇತುವೆಯ ನಿರ್ಮಾಣಕ್ಕೆ ರಾಜ್ಯ ವಿಪತ್ತು ಉಪಶಮನ ನಿಧಿಯಡಿ 1.75 ಕೋಟಿ ಅನುದಾನ ಬಿಡುಗಡೆಯಾಗಿದೆ.
ಅರಮನೆಗಯದಲ್ಲಿ ಜನರ ಸಂಚಾರಕ್ಕೆ ಶಾಶ್ವತ ಪರಿಹಾರ ಮಾಡಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು.












