ಸುಳ್ಯ:ಸುಳ್ಯ ಹಾಗೂ ಆಸುಪಾಸಿನ 16 ಮೊಹಲ್ಲಾಗಳ ಖಾಝಿಯಾಗಿ
ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ. ಪಿ. ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಅಧಿಕಾರ ಸ್ವೀಕರಿಸಿದರು. ಇಂದು ಸುಳ್ಯಕ್ಕೆ ಆಗಮಿಸಿ ಗಾಂಧಿನಗರ ಕೇಂದ್ರ ಜುಮ್ಮಾ ಮಸ್ಜಿದ್ ವಠಾರದಲ್ಲಿ ನಡೆದ ಖಾಝಿ ಸ್ವೀಕಾರ ಸಮಾರಂಭದಲ್ಲಿ ಗಾಂಧಿನಗರ ಮಹಿಯ್ಯದ್ದೀನ್ ಜುಮ್ಮಾ ಮಸ್ಜಿದ್ ಸೇರಿದಂತೆ 16 ಮೊಹಲ್ಲಾಗಳ
ಖಾಝಿಯಾಗಿ ಅಧಿಕಾರ ಸ್ವೀಕರಿಸಿದರು.ಕೊಡಗು, ಚಿಕ್ಕಮಗಳೂರು ಸಂಯುಕ್ತ ಜಮಾಅತ್ ಖಾಝಿ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದ್ ಖಾಝಿ ವಚನ ಬೋಧಿಸಿದರು.
ಅಧ್ಯಕ್ಷತೆಯನ್ನು ಗಾಂಧಿನಗರ ಎಂಜೆಎಂ ಅಧ್ಯಕ್ಷ ಹಾಜಿ ಕೆ. ಎಂ. ಮಹಮ್ಮದ್ ಕೆಎಂಎಸ್ ವಹಿಸಿದ್ದರು.ಸುಳ್ಯ ತಾಲೂಕು ಸುನ್ನಿ ಜಂಇಯತುಲ್ ಉಲಮಾ ಅಧ್ಯಕ್ಷ ಅಸ್ಸಯ್ಯಿದ್ ಕುಂಞಕೋಯ ತoಞಳ್ ಸಅದಿ ದುವಾ ಪ್ರಾರ್ಥನೆ ನೆರವೇರಿಸಿದರು. ಗಾಂಧಿನಗರ ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ಓಲೆಮುಂಡೋವ್ ಉಸ್ತಾದ್ ಮಹಮೂದ್ ಮುಸ್ಲಿಯಾರ್, ಸಅದಿಯಾ ಆಡಳಿತಾಧಿಕಾರಿ ಅಬ್ದುಲ್ ಖಾದರ್ ಮದನಿ, ಎಂಜೆಎಂ ಮಾಜಿ ಅಧ್ಯಕ್ಷರುಗಳಾದ ಹಾಜಿ ಕೆ. ಬಿ. ಮಹಮ್ಮದ್, ಆದo ಹಾಜಿ ಕಮ್ಮಾಡಿ, ಸುಳ್ಯ ತಾಲೂಕು ಸುನ್ನಿ ಸಂಯುಕ್ತ ಜಮಾಅತ್ ಅಧ್ಯಕ್ಷ ಮಹಮ್ಮದ್ ಕುoಞಿ ಗೂನಡ್ಕ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್ , ಸದರ್ ಉಸ್ತಾದ್ ಸಿರಾಜುದ್ದೀನ್ ಸಖಾಫಿ, ಮುದರ್ರಿಸ್ ಇರ್ಫಾನ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು
ಜಮಾಅತ್ ಆಡಳಿತ ಸಮಿತಿ ಮಾಜಿ ಅಧ್ಯಕ್ಷ ಕೆ. ಎಂ. ಮುಸ್ತಫ ಸ್ವಾಗತಿಸಿ, ಜತೆ ಕಾರ್ಯದರ್ಶಿ ಕೆ. ಎಸ್. ಉಮ್ಮರ್ ವಂದಿಸಿದರು
ಜಮಾಅತ್ ಆಡಳಿತ ಸಮಿತಿ ಸದಸ್ಯ ಕೆ. ಬಿ. ಅಬ್ದುಲ್ ಮಜೀದ್,ಹಮೀದ್ ಸುಣ್ಣಮೂಲೆ ಕಾರ್ಯಕ್ರಮ ನಿರೂಪಿಸಿದರು.