ಸುಳ್ಯ: ಅಮೃತಭವನ ಶಟಲ್ ಬ್ಯಾಡ್ಮಿಂಟನ್ ಲೀಗ್ ಅಮೃತ ಭವನದಲ್ಲಿ ನಡೆಯಿತು.ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಪಂದ್ಯಾಕೂಟವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಪ್ರೆಸ್ ಕ್ಲಬ್ ಜೊತೆ ಕಾರ್ಯದರ್ಶಿ ಹಸೈನಾರ್ ಜಯನಗರ, ನಿರ್ದೇಶಕ ಗಂಗಾಧರ ಕಲ್ಲಪಳ್ಳಿ, ಕೋಟಕ್ಕಲ್ ಆರ್ಯವೈದ್ಯ ಶಾಲಾದ ಪ್ರಶಾಂತ್ ಕುಮಾರ್ ಕೋಟಕ್ಕಲ್, ಉಪನ್ಯಾಸಕರಾದ ರಾಜೇಶ್ ಆಲೆಟ್ಟಿ ಅತಿಥಿಗಳಾಗಿದ್ದರು. ಅಮೃತಭವನ ಲೀಗ್
ಸಂಘಟಕರಾದ ಪ್ರಮೋದ್ ನಾಯಕ್ ಸ್ವಾಗತಿಸಿ, ಕಾರ್ತಿಕ್ ನಾಗಪಟ್ಟಣ ವಂದಿಸಿದರು. ಕೃಷ್ಣಪ್ರಸಾಸ್ ಕಾರ್ಯಕ್ರಮ ನಿರೂಪಿಸಿದರು.ಬ್ಯಾಡ್ಮಿಟನ್ ಲೀಗ್ ತಂಡದ ನಾಯಕರಾದ ಕೃಷ್ಣಪ್ರಸಾದ್, ಮುಹಮ್ಮದ್ ಕೈಫ್, ಶ್ರೇಯಸ್ ಎಸ್, ಮುಹಮ್ಮದ್ ಸೈಫ್, ತಝ್ವಿತ್ ನಾಗಪಟ್ಟಣ, ಆಟಗಾರರಾದ ವಿಜಯ್ ನಾಗಪಟ್ಟಣ, ಸೆಲ್ವಿನ್ ರಾಜ್, ಸುರೇಶ್ ಸೋಣಂಗೇರಿ, ಧನುಶ್ ಎಸ್, ಸುರೇಶ್ ನಾಗಪಟ್ಟಣ, ಸುರೇಂದ್ರ ನಾಗಪಟ್ಟಣ, ಡಾ.ಸೌರಭ್, ಚಂದನ್, ಇಂಚರ, ದಿವಿತ್ ಪ್ರಸಾದ್, ಮಣಿಕಂಠ, ತಹಲತ್.
ಅಮೃತಭವನದಲ್ಲಿ ಬ್ಯಾಡ್ಮಿಂಟನ್ ಆಡುವ
ತಲಾ 4 ಆಟಗಾರರನ್ನು ಒಳಗೊಂಡ 5 ತಂಡಗಳ ಮಧ್ಯೆ ಲೀಗ್ ಮಾದರಿಯ ಪಂದ್ಯಾಟ ನಡೆಯಿತು.





