ಸುಳ್ಯ:ಇಕೋ ಕಾರೊಂದು ಟೈಲರಿಂಗ್ ಶಾಫ್ಗೆ ನುಗ್ಗಿದ ಘಟನೆ ಇಂದು ಮಧ್ಯಾಹ್ನ ಸುಳ್ಯ ಅಂಬೆಟಡ್ಕದಲ್ಲಿ ನಡೆದಿದೆ.ನಿಯಂತ್ರಣ ತಪ್ಪಿದ ಕಾರು ಸುಳ್ಯ ಅಂಬೆಟಡ್ಕದ ಅಕ್ಷಯ್ ಆರ್ಕೇಡ್ನಲ್ಲಿರುವ ಇನ್ ಸ್ಟೈಲ್ ಟೈಲರ್ ಅಂಗಡಿಗೆ ನುಗ್ಗಿದೆ. ಅಂಗಡಿಯ ಬಾಗಿಲು, ವಸ್ತುಗಳು, ಟೈಲರ್ ಮಿಷನ್, ವಸ್ತ್ರಗಳಿಗೆ ಹಾನಿ ಸಂಭವಿಸಿದೆ.ಮಧ್ಯಾಹ್ನದ ವೇಳೆ ಊಟದ ಸಮಯವಾದ ಕಾರಣ ಅಂಗಡಿಯಲ್ಲಿ ಯಾರು ಇರಲಿಲ್ಲ. ಇದರಿಂದ ಭಾರೀ ಅವಘಡ ತಪ್ಪಿದೆ. ಸ್ಥಳದಲ್ಲಿ ಹೆಚ್ಚಿನ ಜನರು ಸೇರಿ ಕಾರನ್ನು ಹೊರ ತೆಗೆಯುವಲ್ಲಿ ಸಹಕರಿಸಿದರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post












