ಸುಳ್ಯ:ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಡಾ.ಕುರುಂಜಿ ವೆಂಕಟ್ರಮಣ ಗೌಡರ ಪುಣ್ಯ ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಭವಾನಿ ಶಂಕರ್ ಅಡ್ತಲೆ,ಕಾಲೇಜಿನ ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರರವರು ದೀಪ ಬೆಳಗಿಸಿ, ಪುಷ್ಪರ್ಚನೆ ಮಾಡಿ
ನಮನ ಸಲ್ಲಿಸಿದರು.ಕಾರ್ಯಕ್ರಮದ ಅತಿಥಿಗಳಾಗಿ ಕೆವಿಜಿ ಐಟಿಐನ ಕಛೇರಿ ಅಧಿಕ್ಷಕರಾದ ಭವಾನಿಶಂಕರ ಅಡ್ತಲೆ ಮಾತನಾಡಿ ಡಾ.ಕೆ.ವಿ.ಜಿ ಹಲವು ಆಯಾಮಗಳ ಕಾರ್ಯ ಹಾಗೂ ಸಾಧನೆಯ ಜೊತೆಗೆ ಅವರು ಶಿಕ್ಷಣತಜ್ಞ, ಸಮಾಜ ಸುಧಾರಕ, ತತ್ವಜ್ಞಾನಿ, ಮಹಾನ್ ಬೋಧಕ, ಸಮರ್ಥ ಆಡಳಿತಗಾರ ಮತ್ತು ಮಹಾನ್ ಲೋಕೋಪಕಾರಿ ಗುಣಗಳಿಂದ
ಸುಳ್ಯದ ಚಿತ್ರಣ ಬದಲಿಸಿದರು ಎಂಬುದನ್ನು ತಿಳಿಸಿದರು. ಇದರೊಟ್ಟಿಗೆ ಪ್ರಥಮ ಕಿರುಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.ಕಾಲೇಜಿನ ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ,ಕಾಲೇಜಿನ ಉಪ ಪ್ರಾಂಶುಪಾಲರಾದ ದೀಪಕ್ ವೈ ಆರ್, ಹಾಗೂ ಎಲ್ಲಾ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.