ಸುಳ್ಯ:ಆಧುನಿಕ ಸುಳ್ಯದ ನಿರ್ಮಾತೃ ಶಿಕ್ಷಣ ಕ್ರಾಂತಿಯ ಹರಿಕಾರ ಪೂಜ್ಯ ಡಾ. ಕುರುಂಜಿ ವೆಂಕಟ್ರಮಣ ಗೌಡರ 11ನೇ ಪುಣ್ಯ ಸ್ಮರಣಿಯ ಕಾರ್ಯಕ್ರಮವು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ‘ಬಿ’ ಇದರ ಆಡಳಿತ ಕಛೇರಿಯಲ್ಲಿ ನಡೆಯಿತು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ‘ಬಿ’ ಆಡಳಿತದಡಿಯಲ್ಲಿರುವ
ವಿದ್ಯಾಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು..ಜೆ ಪೂಜ್ಯರ ಭಾವಚಿತ್ರದ ಮುಂದೆ ದೀಪ ಬೆಳಗಿಸಿ ಪುಷ್ಪನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಕೆ.ವಿ.ಜಿ. ಪಾಲಿಟೆಕ್ನಿಕ್ನ ಪ್ರಾಂಶುಪಾಲರಾದ ಶ್ರೀಧರ್ ಎಂ.ಕೆ, ಉಪ ಪ್ರಾಂಶುಪಾಲರಾದ ಅಣ್ಣಯ್ಯ, ಕಛೇರಿ ಅಧೀಕ್ಷಕರಾದ ಶಿವರಾಮ ಕೇರ್ಪಳ, ಲೆಕ್ಕ ಅಧೀಕ್ಷಕರಾದ ಧನಂಜಯ ಕಲ್ಲುಗದ್ದೆ, ದಂತ ಮಹಾವಿದ್ಯಾಲಯದ ಆಡಳಿತಾಧಿಕಾರಿ ಮಾಧವ ಬಿ.ಟಿ, ಇಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ನಾಗೇಶ್ ಕೊಚ್ಚಿ, ದೈಹಿಕ ಶಿಕ್ಷಕ ಭಾಸ್ಕರ ಬೆಳಗದ್ದೆ, ಕೆ.ವಿ.ಜಿ ಪಾಲಿಟೆಕ್ನಿಕ್ನ ಸಿಬ್ಬಂದಿಗಳಾದ ಪ್ರಸನ್ನ ಕಲ್ಲಾಜೆ, ಕಮಲಾಕ್ಷ ನಂಗಾರು, ಪದ್ಮನಾಭ ಕಾನಾವುಜಾಲು, ಸ್ವಸ್ತಿಕ್ ಸುತ್ತುಕೋಟೆ, ಸ್ವಾತಿ ಎಂ.ಎನ್ ಹಾಜರಿದ್ದು ಡಾ. ಕೆ.ವಿ.ಜಿ ಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಅವರನ್ನು ಸ್ಮರಣೆ ಮಾಡಿಕೊಂಡರು.