ಸುಳ್ಯ:ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವು ಕೆವಿಜಿ ಆಯುರ್ವೇದ ಫಾರ್ಮ ಹಾಗೂ ರಿಸರ್ಚ್ ಸೆಂಟರಿನ ಆಡಿಟೋರಿಯಂ ನಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆವಿಜಿ ಆಯುರ್ವೇದ ಅಲುಮ್ನಿ ಅಸೋಸಿಯೇಷನ್ನಿನ ಅಧ್ಯಕ್ಷರಾದ ಡಾ. ಗುರುಪ್ರಸಾದ್ ಅಗ್ಗಿತ್ತಾಯ ವಹಿಸಿದ್ದರು.ಗೌರವ ಅತಿಥಿಗಳಾಗಿ 1997-98 ಸಾಲಿನ
ವಿದ್ಯಾರ್ಥಿ ಅಖಿಲ ರವಿ ಮೈಕ್ರೋ ಇಂಡಸ್ಟ್ರೀಸ್ ಇದರ ಮುಖ್ಯಸ್ಥರಾದ ಡಾ. ರಾಜಾರಾಮ್ ಎ ಆರ್, 2001-06 ಸಾಲಿನ ವಿದ್ಯಾರ್ಥಿಯಾದ ಎಂ.ವಿ.ಆರ್ ಆಯುರ್ವೇದ ಮೆಡಿಕಲ್ ಕಾಲೇಜು ಪರಶ್ಶಿನಿಕಡವು ಕಣ್ಣೂರು ಕೇರಳ ಇದರ ಉಪ ಪ್ರಾಂಶುಪಾಲರಾದ ಡಾ. ಶೈಜು ಕೃಷ್ಣನ್ ಪಿ ಹಾಗೂ 1996-97 ಸಾಲಿನ ವಿದ್ಯಾರ್ಥಿಯಾದ ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿ ಯವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಪ್ರಸ್ತುತ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.
ವೇದಿಕೆಯಲ್ಲಿ ಕೆವಿಜಿ ಆಯುರ್ವೇದ ಅಲುಮ್ನಿ ಅಸೋಸಿಯೇಷನ್ನಿನ ಕಾರ್ಯದರ್ಶಿ ಡಾ. ಅವಿನಾಶ್ ಕೆ ವಿ, ಖಜಾಂಜಿಯಾದ ಡಾ. ವಿನಯ್ ಶಂಕರ್ ಭಾರದ್ವಾಜ್ ಸಮ್ಮಿಲನದ ಸಂಚಾಲಕರಾದ ಡಾ. ಹರ್ಷಿತ ಎಂ ಇವರು ಉಪಸ್ಥಿತರಿದ್ದರು.ಗೌರವ ಅತಿಥಿಗಳಾಗಿ ಆಗಮಿಸಿದ ಡಾ. ರಾಜಾರಾಮ್ ಎ ಆರ್ ಹಾಗೂ ಡಾ. ಶೈಜು ಕೃಷ್ಣನ್ ಪಿ ಇವರನ್ನು ಅಲುಮ್ನಿ ಅಸೋಸಿಯೇಷನ್ನಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯದರ್ಶಿಯಾದ ಡಾ. ಅವಿನಾಶ್ ಕೆ ವಿ ವಾರ್ಷಿಕ ವರದಿಯನ್ನು ವಚಿಸಿದರು.
ಸಮ್ಮಿಲನಕ್ಕೆ ಆಗಮಿಸಿದ ಹಳೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಹಳೆಯ ವಿದ್ಯಾರ್ಥಿಯಾದ ಡಾ. ಸ್ಮಿತಾ ತಂಬನ್ ಪ್ರಾರ್ಥಿಸಿ, ಡಾ. ಹರ್ಷಿತಾ ಎಂ ಸ್ವಾಗತಿಸಿ, ಡಾ. ವಿನಯ್ ಶಂಕರ್ ಭಾರದ್ವಾಜ್ ವಂದಿಸಿ, ಡಾ. ಪ್ರಜಿತಾ ಜಿ ಹಾಗೂ ಡಾ. ನಿಲೋಫರ್ ತಹನಿ ನಿರೂಪಿಸಿದರು.