ಕಾರ್ಲೋಸ್: ಯುವ ಟೆನಿಸ್ ಸ್ಟಾರ್ ಕಾರ್ಲೋಸ್ ಅಲ್ಕರಾಝ್ ಸತತ ಎರಡನೇ ವರ್ಷ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದಾರೆ. 21 ವರ್ಷದ ಅಲ್ಕರಾಝ್ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ 6-2, 6-2, 7-6 (7-4) ನೇರ ಸೆಟ್ಗಳಿಂದ 7 ಬಾರಿಯ ಚಾಂಪಿಯನ್ ಸರ್ಬಿಯಾದ ಅನುಭವಿ ನೊವಾಕ್ ಜೊಕೊವಿಚ್ ಅವರನ್ನು ಸೋಲಿಸುವ ಮೂಲಕ ನಾಲ್ಕನೇ
ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಕಳೆದ ಬಾರಿಯೂ ಇದೇ ಜೋಡಿ ವಿಂಬಲ್ಡನ್ ಫೈನಲ್ಗೆ ಲಗ್ಗೆ ಇಟ್ಟಿದ್ದವು. ಆ ಪಂದ್ಯದಲ್ಲಿ ಸರ್ಬಿಯಾದ ಸೂಪರ್ ಸ್ಟಾರ್ ಜೊಕೊವಿಚ್ ಅವರನ್ನು ಇದೇ ಅಲ್ಕರಾಝ್ 1-6, 7-6, 6-1, 3-6, 6-4 ಸೆಟ್ಗಳಿಂದ ಮಣಿಸಿ ಚೊಚ್ಚಲ ವಿಂಬಲ್ಡನ್ ಗೆದ್ದು ಬೀಗಿದ್ದರು.
ಇದೀಗ ಈ ಬಾರಿಯೂ ಅಲ್ಕರಾಝ್, 7 ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಚ್ ಅವರನ್ನು 6-2, 6-2, 7-6 (7-4) ನೇರ ಸೆಟ್ಗಳಿಂದ ಸೋಲಿಸುವ ಮೂಲಕ ನಾಲ್ಕನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಪಂದ್ಯದ ಮೊದಲ ಎರಡು ಸೆಟ್ಗಳಲ್ಲಿ ಅಲ್ಕರಾಝ್ ಪ್ರಾಬಲ್ಯ ಮೆರೆದರು. ಮೊದಲ ಸೆಟ್ ಅನ್ನು 6-2 ರಿಂದ ಗೆದ್ದುಕೊಂಡಿದ್ದ ಅಲ್ಕರಾಝ್, ಎರಡನೇ ಸೆಟ್ ಅನ್ನು 6-2 ರಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರು. ಇತ್ತ ಜೊಕೊವಿಕ್ ಮೂರನೇ ಸೆಟ್ನಲ್ಲಿ ಪುನರಾಗಮನ ಮಾಡಿದರಾದರೂ ಆ ಹೊತ್ತಿಗೆ ಅದು ತುಂಬಾ ತಡವಾಗಿತ್ತು. ಮೂರನೇ ಸೆಟ್ ಅನ್ನು ಟೈಬ್ರೇಕ್ ಮೂಲಕ ನಿರ್ಧರಿಸಬೇಕಾಯಿತು. ಅಂತಿಮವಾಗಿ ಕಾರ್ಲೋಸ್ ಅಲ್ಕರಾಝ್ 7-4 ರಿಂದ ಗೆಲ್ಲುವ ಮೂಲಕ ಸತತ ಎರಡನೇ ಬಾರಿಗೆ ವಿಂಬಲ್ಡನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.