ಅಜ್ಜಾವರ: ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಮೇನಾಲ 4ನೇ ವಾರ್ಡಿನ ಕಲ್ಲಗುಡ್ಡೆ ಪರಿಸರದ 90 ಮನೆಗಳಿಗೆ ಒಂದು ತಿಂಗಳುಗಳಿಂದ ನೀರಿನ ಸಮಸ್ಯೆ ಎದುರಾಗಿತ್ತು. ಸ್ಥಳೀಯ ಪಂಚಾಯತ್ ಸದಸ್ಯರು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸಾದ್ ರೈ ಮೇನಾಲ ಹಾಗೂ ಗ್ರಾಮ ಪಂಚಾಯತ್ ಅಜ್ಜಾವರ ಆಡಳಿತ ಮತ್ತು
ಸುಳ್ಯ ತಾಲೂಕು ಕಾರ್ಯನಿರ್ವಾಹಕ ಅಭಿಯಾಂತರರು ನೀರು ಸರಬರಾಜು ನೈರ್ಮಲ್ಯ ಇಲಾಖೆಯ ಸಹಾಯದಿಂದ ಕೊಳವೆ ಬಾವಿ ಕೊರೆದು ನೀರು ಸರಬರಾಜಿಗೆ ವ್ಯವಸ್ಥೆಯ ಮಾಡಲಾಯಿತು. ಈ ಸಂದರ್ಭದಲ್ಲಿ ದಕ್ಷಿಣಕನ್ನಡ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ರಂಜೀತ್ ರೈ ಮೇನಾಲ ಸಿಹಿ ತಿಂಡಿ ವಿತರಣೆ ಮಾಡಿದರು. ಸಂದರ್ಭದಲ್ಲಿ ಕೃಷ್ಣಪ್ಪ ಕೆ,ಮೋಹನ, ಸುಕುಮಾರ್,ನಾರಾಯಣ, ಪ್ರಭಾಕರ,ಜನಾರ್ದನ, ಭಾಸ್ಕರ್,ಕೃಷ್ಣಪ್ಪ ಪಿ.ಸಿ,ಶಿವರಾಮ,ಜಯರಾಮ, ಕರುಣಾಕರ,ಸನತ್, ಶರತ್, ಉದಯಕುಮಾರ್, ಮುಝಮ್ಮಿಲ್ ಬಾಡೇಲು,ಮನೋಜ್,ಶ್ರೀಧರ,ಉದಯ,ಗುರುವಪ್ಪ ಕಾಟಿಪಳ್ಳ, ಸಹಕಾರ ನೀಡಿದರು. ಯತೀಶ್ ಮೇನಾಲ,ಮೇನಾಲ ಶಾಲೆ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಸೌಕತ್ ಆಲಿ ಮೇನಾಲ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಧರ್ ಮಣಿಯಾಣಿ ಮೇನಾಲ.ಗ್ರಾಮ ಪಂಚಾಯತ್ ಅಜ್ಜಾವರ ಅಭಿವೃದ್ಧಿ ಅಧಿಕಾರಿ ಜಯಮಾಲ,ಪಂಚಾಯತ್ ಸಿಬ್ಬಂದಿ ಲೋಕೇಶ್ ಪಲ್ಲತ್ತಡ್ಕ, ಇಬ್ರಾಹಿಂ ಬೇಲ್ಯ, ಚಂದ್ರಶೇಖರ ಕೆ.ಪಲ್ಲತ್ತಡ್ಕ ಉಪಸ್ಥಿತರಿದ್ದರು