ಸುಳ್ಯ:ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮ ಪಂಚಾಯತ್ಗೆ ಮೇನಾಲದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಗ್ರಂಥಾಲಯ ಹಾಗೂ ಘನ ತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ಗ್ರಂಥಾಲಯ ಹಾಗೂ ಘನತ್ಯಾಜ್ಯ ಘಟಕವನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿ ಮಾತನಾಡಿ ಗ್ರಾಮವು ಉತ್ತಮ ಕೆಲಸಗಳೊಂದಿಗೆ ಸರ್ವತೋಮುಖ ಅಭಿವೃದ್ಧಿಯಾಗಲಿ. ಜನರಿಗೆ ನೆರವಾಗುವ ನಿಟ್ಟಿನಲ್ಲಿ
ಅಧಿಕಾರಿಗಳು ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು. ಸಭಾ ಕಾರ್ಯಕ್ರಮವನ್ನು ಮೇನಾಲ ಕಾಳಿಕಾ ದುರ್ಗಾಪರಮೇಶ್ವರಿ ಕ್ಷೇತ್ರದ ಧರ್ಮದರ್ಶಿ ಪದ್ಮನಾಭ ಸ್ವಾಮಿ ಉದ್ಘಾಟಿಸಿದರು.ಗ್ರಾ.ಪಂ. ಅಧ್ಯಕ್ಷೆ ದೇವಕಿ ವಿಷ್ಣುನಗರ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಜಿ.ಪಂ. ಸಹಾಯಕ ನಿರ್ವಾಹಕ ಅಭಿಯಂತರ ಫಾಯಜ್, ದ.ಕ. ಜಿಲ್ಲಾ ಶಿಕ್ಷಣ ಫೌಂಡೇಶನ್ನ ಜಿಲ್ಲಾ ವ್ಯವಸ್ಥಾಪಕರಾದ ಲವೀಶ್ ಕುಮಾರ್, ಕರ್ನಾಟಕ ಬ್ಯಾಂಕ್ ಅಜ್ಜಾವರ ಶಾಖೆಯ ವ್ಯವಸ್ಥಾಪಕ ಕಾಳೀದಾಸ್ ಕೆ. ಮುಖ್ಯಅತಿಥಿಗಳಾಗಿದ್ದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ಲ ಅಜ್ಜಾವರ, ಮಾಜಿ ಅಧ್ಯಕ್ಷೆ ಸತ್ಯವತಿ ಬಸವನಪಾದೆ, ಮಾಜಿ ಉಪಾಧ್ಯಕ್ಷೆ ಲೀಲಾ ಮನಮೋಹನ್, ಮಾಜಿ ಉಪಾಧ್ಯಕ್ಷ ಜಯರಾಮ ಅತ್ಯಡ್ಕ, ರಾಹುಲ್ ಅಡ್ಪಂಗಾಯ, ಶ್ವೇತಾ ಕುಮಾರಿ ಶಿರಾಜೆ, ರವಿರಾಜ್ ಕರ್ಲಪ್ಪಾಡಿ, ದಿವ್ಯ ಪಡ್ಡಂಬೈಲು, ಗೀತಾ ಕಲ್ಲುಗುಡ್ಡೆ, ಸರೋಜಿನಿ ಕರಿಯಮೂಲೆ, ವಿಶ್ವನಾಥ ಮುಳ್ಯಮಠ, ಶಿವಕುಮಾರ್ ಮುಳ್ಯ, ಅಜ್ಜಾವರ ಮೇನಾಲ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರದೀಪ್ ಪೂಜಾರಿ ಪೊಡುಂಬ, ಮುಖ್ಯೋಪಾಧ್ಯಾಯರಾದ ಕನಕ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ರಂಜಿತ್ ರೈ ಮೇನಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎ.ಕೆ.ಜಯಮಾಲ ಸ್ವಾಗತಿಸಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಸಾದ್ ರೈ ಮೇನಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶ್ಮಿಭಟ್ ಅಜ್ಜಾವರ ಕಾರ್ಯಕ್ರಮ ನಿರೂಪಿಸಿದರು.












