ಸುಳ್ಯ:10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೆವಿಜಿ ಅಮರಜ್ಯೋತಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ ಏ.ಜೆ. ಸ್ಕಾಲರ್ಶಿಪ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಸ್ಕಾಲರ್ ಶಿಫ್ ವಿಜೇತರನ್ನು ಘೋಷಣೆ ಮಾಡಲಾಗಿದೆ. ವಿಜೇತರ ವಿವರ ಈ ಕೆಳಗಿನಂತೆ ಇದೆ..
ವಿಜ್ಞಾನ ವಿಭಾಗದಲ್ಲಿ ಶೇ.100(ಪ್ಲಾಟಿನಂ) ವಿಜೇತರು ಮರಿಯಮ್ ರಿಫಾ, ಸೈಂಟ್ ಜೋಸೆಫ್ ಪ್ರೌಢ ಶಾಲೆ ಸುಳ್ಯ, ಶೇ.75(ಡಯಮಂಡ್)- ಆಕಾಶ್.ಯು, ಸೈಂಟ್ ಜೋಸೆಫ್ ಪ್ರೌಢ ಶಾಲೆ ಸುಳ್ಯ,
ಶೇ.50(ಗೋಳ್ಡ್) ಅರವಿಂದ, ಸ್ನೇಹ ಪ್ರೌಢ ಶಾಲೆ ಸುಳ್ಯ, ಶೇ.25 (ಸಿಲ್ವರ್)- ಪ್ರತೀಕ್ಷ,ಸೈಂಟ್ ಜೋಸೆಫ್ ಪ್ರೌಢ ಶಾಲೆ ಸುಳ್ಯ ಹಾಗೂ ಆಕಾಶ್ ಜಿ.ಆರ್,ಕೆವಿಜಿ ಐಪಿಎಸ್ ಸುಳ್ಯ. ಶೇ.15(ಬ್ರೌನ್ಝ್) ಇಷಾನ್.ಕೆ, ಸೈಂಟ್ ಜೋಸೆಫ್ ಪ್ರೌಢ ಶಾಲೆ ಸುಳ್ಯ,
ವಾಣೀಜ್ಯ ವಿಭಾಗದಲ್ಲಿ ಶೇ.100(ಪ್ಲಾಟಿನಂ) ವಿಜೇತರು: ವಿಧುಲತ.ಪಿ.ಎಲ್, ಸ್ನೇಹ ಪ್ರೌಢ ಶಾಲೆ ಸುಳ್ಯ. ಶೇ.75(ಡಯಮಂಡ್)- ಸ್ಕಂದ ದಿಯಾ.ಪಿ.ಕಲ್ಲಾಜೆ, ಕೆವಿಜಿ ಐಪಿಎಸ್ ಸುಳ್ಯ.
ಶೇ.50(ಗೋಳ್ಡ್) ಜನನಿ ಎಂ.ಪಿ, ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ.
ಶೇ.25 (ಸಿಲ್ವರ್)-
ಸ್ಪಂದನ.ಕೆ. ಕೆವಿಜಿ ಐಪಿಎಸ್ ಸುಳ್ಯ,
ಶಿವಾನಿ.ಆರ್.,ಕೆವಿಜಿ ಐಪಿಎಸ್ ಸುಳ್ಯ. ಶೇ.15(ಬ್ರೌನ್ಸ್) ನಿಷಾ,ಸರಕಾರಿ ಪ್ರೌಢ ಶಾಲೆ ಐವರ್ನಾಡು.

ಇದಲ್ಲದೆ ಎಜೆ ಸ್ಕಾಲರ್ಶಿಪ್ ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳಿಗೆ ಅವರು ಪಡೆದ ಅಂಕದ ಆಧಾರದಲ್ಲಿ ಶೇ.10 ಹಾಗೂ ಶೇ.5ರಷ್ಟು ಬೋಧನಾ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ಜ.4ರಂದು ನಡೆದ ಪರೀಕ್ಷೆಯಲ್ಲಿ 300ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ತಲಾ 5 ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ಭೋದನಾ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುತ್ತದೆ. ಒಟ್ಟು 15 ಲಕ್ಷಕ್ಕೂ ಮೇಲ್ಪಟ್ಟ ಶುಲ್ಕ ವಿನಾಯಿತಿ ವಿದ್ಯಾರ್ಥಿಗಳಿಗೆ ದೊರೆಯಲಿದ್ದು ,ಪ್ರಥಮ ಬಂದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ 100% ರಿಯಾಯಿತಿ, ದ್ವಿತೀಯ 75% ರಿಯಾಯಿತಿ, ತೃತೀಯ 50% ರಿಯಾಯಿತಿ, ನಾಲ್ಕನೇ ಸ್ಥಾನ 25% , ಐದನೇ ಸ್ಥಾನ 15% ರಿಯಾಯಿತಿ ಇರುತ್ತದೆ.












