ಸುಳ್ಯ:ಕೆವಿಜಿ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಿತ ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ದಶಮಾನೋತ್ಸವ ಪ್ರಯುಕ್ತ ಡಿ.26ರಂದು ನಡೆಯುವ ಮ್ಯಾರಥಾನ್ ಹಾಗೂ ಕಾಲೇಜು ವಾರ್ಷಿಕೋತ್ಸವ ‘ಎಜೆ ಫೆಸ್ಟ್’ನ ಬ್ಯಾನರ್ ಬ್ಯಾನರ್ ಲಾಂಚ್ ಕಾರ್ಯಕ್ರಮ ನಡೆಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಯಶೋದಾ ರಾಮಚಂದ್ರ ಹಾಗೂ ಉಪಪ್ರಾಂಶುಪಾಲರಾದ ದೀಪಕ್ ವೈ.ಆರ್. ಮ್ಯಾರಥಾನ್ನ

ಬ್ಯಾನರ್ ಬಿಡುಗಡೆ ಮಾಡಿದರು. ಚೆಂಡೆ, ವಾದ್ಯ,ಮೇಳಗಳೊಂದಿಗೆ, ಹಾಡು, ನೃತ್ಯದ ಮೂಲಕ ವಿದ್ಯಾರ್ಥಿಗಳು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕಮಲಾಕ್ಷ ನಂಗಾರು, ದೈಹಿಕ ಶಿಕ್ಷಣ ನಿರ್ದೇಶಕರಾದ ರಾಜೇಶ್ ಕುಮಾರ್ ಎಂ.ಎಸ್, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಾದ ಮಲ್ಲಿಕಾ ಎಂ.ಎಲ್, ಭವ್ಯ ಸಿ.ಟಿ, ಬೀನ.ಬಿ.ಎನ್, ರಾಜೇಶ್ ಜೆ.ಕೆ, ದೀಕ್ಷಿತ್ ಎಂ.ಕೆ, ಅರ್ಪಿತಾ ಕೆ.ಎನ್,ರತ್ನಾವತಿ.ಬಿ, ಸುಶ್ಮಿತ ಜಾಕೆ,ರೇವತಿ ಕೆ.ವಿ., ಅಭಿಜ್ಞ.ಎ, ಬ್ರಿಜೇಶ್.ಕೆ.ಬಿ, ವರ್ಷ ಯು.ವಿ,ಸುಜಾತ.ಡಿ, ಕೀರ್ತಿ.ಕೆ, ಸೌಮ್ಯ.ಪಿ.ಎಸ್, ಸಂಪತ್ ಶೆಟ್ಟಿ, ಅಕ್ಷತಾ ಡಿ.ಜೆ ಉಪಸ್ಥಿತರಿದ್ದರು.









