ಸುಳ್ಯ:ಸುಳ್ಯದ ಪ್ರಥಮ ಕೃಷಿ ಪರಿಕರಗಳ ಮಳಿಗೆ ಭಾರತ್ ಆಗ್ರೋ ಸರ್ವೀಸಸ್ ಆ್ಯಂಡ್ ಸಪ್ಲೈಸ್ ಸ್ಥಾಪನೆಯಾಗಿ 50 ವರ್ಷಗಳು ಪೂರ್ತಿಯಾದ ಹಿನ್ನಲೆಯಲ್ಲಿ ಮಾ.7 ರಂದು ಅದ್ದೂರಿ ಆಗ್ರೋ ‘ಸುವರ್ಣ ಸಂಭ್ರಮ’ ಕಾರ್ಯಕ್ರಮ ನಡೆಯಿತು. ಇದರ ಪ್ರಯುಕ್ತ ನಡೆದ ಆಗ್ರೋ ಸಾಂಸ್ಕೃತಿಕ ಸಂಜೆ ಮನ ಸೆಳೆಯಿತು.ಉಜಿರೆ ಎಸ್.ಡಿ.ಯಂ.ಶಿಕ್ಷಣ ಸಂಸ್ಥೆಯ 160 ಮಂದಿ ಕಲಾವಿದರು ಪ್ರಸ್ತುತಿಪಡಿಸಿದ ಸಾಂಸ್ಕೃತಿಕ ಕಲಾ
ವೈಭವ ನೆರೆದ ಪ್ರೇಕ್ಷಕರಿಗೆ ಕಲಾ ಸಾಂಸ್ಕೃತಿಕ ರಸದೌತಣವನ್ನು ಉಣ ಬಡಿಸಿತು. ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ ಸಂಯೋಜನೆಯಲ್ಲಿ ಎಸ್.ಡಿ.ಯಂ.ಶಿಕ್ಷಣ ಸಂಸ್ಥೆ ಉಜಿರೆ ಇಲ್ಲಿನ ಸುಮಾರು 160 ಕ್ಕಿಂತಲೂ ಹೆಚ್ಚು ಕಲಾವಿದರಿಂದ ಸಾಂಸ್ಕೃತಿಕ ಕಲಾ ವೈಭವ ನಡೆಯಿತು. ಕೇರಳದ ಮೋಹಿನಿಯಾಟ್ಟಂ, ಗುಜರಾತ್ ನ ದಾಂಡಿಯಾ- ಗರ್ಭ ನೃತ್ಯ ಒರಿಸ್ಸಾದ ಒಡಿಸ್ಸಿ, ಕರಾವಳಿಯ ಯಕ್ಷಗಾನ ಬ್ಯಾಲೆಟ್, ಭರತನಾಟ್ಯ ಶಿವತಾಂಡವ ರೂಪಕ, ಸ್ಪಾನಿಶ್ ಪ್ಲೆಮೆಂಕೋ ಕ್ರಿಯೇಟಿವ್ ಡ್ಯಾನ್ಸ್, ಸೆಮಿ ಕ್ಲಾಸಿಕಲ್ ಡ್ಯಾನ್ಸ್ ಕೇರಳದ ತೆಯ್ಯಂ ಆಧಾರಿತ ನರಸಿಂಹಾವತಾರ, ಶ್ರೀರಾಮ ಪಟ್ಟಾಭಿಷೇಕ ವಿಶೇಷ ನೃತ್ಯ ರೂಪಕ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಿತು.
100 ಮಂದಿ ಕಲಾವಿದರು ಪ್ರಸ್ತುತಪಡಿಸಿದ ಶ್ರೀ ರಾಮಾಯಣ ದರ್ಶನಂ ನೃತ್ಯ ರೂಪಕ ವಿಶೇಷ ಗಮನ ಸೆಳೆಯಿತು. ಸಭಾಂಗಣ ತುಂಬಿ ತುಳುಕಿದ ಪ್ರೇಕ್ಷಕರು ಕರತಾಡನದೊಂದಿಗೆ ಕಲಾವಿದರನ್ನು ಪ್ರೋತ್ಸಾಹಿಸಿದರು.
ಎಂದು ಭಾರತ್ ಆಗ್ರೋ ಸರ್ವೀಸಸ್ ಆ್ಯಂಡ್ ಸಪ್ಲೈಸ್ನ ಮಾಲಕರಾದ
ರಾಮಚಂದ್ರ ಪಿ, ಮಂಜುಳಾ ರಾಮಚಂದ್ರ, ಸನತ್.ಪಿ.ಆರ್, ದಿವ್ಯ ಸನತ್ ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು.