ಅಜ್ಜಾವರ: ಅಗ್ನಿವೀರ್ ನೌಕಪಡೆಯಲ್ಲಿ ಆಯ್ಕೆಯಾದ ಶಮಂತ್ ಕಾಡುಸೊರಂಜ ಅವರನ್ನು ಸರಕಾರಿ ಪ್ರೌಢಶಾಲೆ ಅಜ್ಜಾವರ, ಪ್ರತಾಪ ಯವಕ ಮಂಡಲ ಅಜ್ಜಾವರ , ಚೈತ್ರ ಯುವತಿ ಮಂಡಲ ಅಜ್ಜಾವರ ಇವುಗಳ ವತಿಯಿಂದ ಗೌರವಿಸಲಾಯಿತು. ಮಕ್ಕಳೊಂದಿಗೆ
ಸಂವಾದ ನಡೆಸಿ ಅಗ್ನಿವೀರ್ ನೌಕಪಡೆಯ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಶಾಲಾ ಮುಖ್ಯ್ಯೋಪಾಧ್ಯಾರಾದ ಗೋಪಿನಾಥ್ ಮೆತ್ತಡ್ಕ, ವಿದ್ಯಾಶಂಕರಿ, ಅಶೋಕ್, ಚಂದ್ರಶೇಖರ ಭಟ್, ನಿರಂಜನ,
ಉಮಾ, ರೇವತಿ, ರಾಜೇಶ್ವರಿ,ಹಾಗೂ ಪ್ರತಾಪ ಯುವಕ ಮಂಡಲ ಅಧ್ಯಕ್ಷ ಗುರುರಾಜ್,ಚೈತ್ರ ಯುವತಿ ಮಂಡಲ ಅಧ್ಯಕ್ಷೆ ಶಶ್ಮಿ ಭಟ್, ವಿನಯ್ ನಾರಲು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.








