ಹ್ಯಾಂಗ್ಝೌ: ಏಷ್ಯನ್ ಗೇಮ್ಸ್ನ ಟಿ20 ಕ್ರಿಕೆಟ್ನ ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವಿನ ಫೈನಲ್ ಪಂದ್ಯಾಟವು ಮಳೆಯಿಂದಾಗಿ ರದ್ದುಗೊಂಡಿದೆ. ಅಫ್ಘಾನಿಸ್ತಾನಕ್ಕಿಂತಲೂ ಉತ್ತಮ ರ್ಯಾಂಕಿಂಗ್ ಹೊಂದಿರುವ ಕಾರಣ ಭಾರತವನ್ನು ವಿಜಯಿ ತಂಡವೆಂದು ಘೋಷಿಸಲಾಗಿದೆ. ಈ ಮೂಲಕ ಭಾರತ ತಂಡವು ಚಿನ್ನದ ಪದಕ ಗೆದ್ದಿದೆ.
ಇದೇ ಮೊದಲ ಬಾರಿಗೆ ಏಶ್ಯನ್ ಗೇಮ್ಸ್ನಲ್ಲಿ
ಟಿ20 ಕ್ರಿಕೆಟ್ ಅನ್ನು ಕೂಡಾ ಸೇರಿಸಲಾಗಿದ್ದು, ಭಾರತದ ಮಹಿಳಾ ಹಾಗೂ ಪುರುಷರ ತಂಡವು ಚಿನ್ನದ ಪದಕಗಳನ್ನು ಗೆದ್ದಿವೆ.
ಭಾರತೀಯ ಪುರುಷರ ಕಬಡ್ಡಿ ತಂಡವು ಹಾಲಿ ಚಾಂಪಿಯನ್ ಇರಾನ್ ತಂಡವನ್ನು 33-29 ಅಂತರದಲ್ಲಿ ಮಣಿಸುವ ಮೂಲಕ ಕಬಡ್ಡಿ ಪಂದ್ಯದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತು.
ಇದಕ್ಕೂ ಮುನ್ನ, ಮಹಿಳಾ ಕಬಡ್ಡಿ ತಂಡ ಕೂಡಾ ಚಿನ್ನದ ಪದಕವನ್ನು ಜಯಿಸಿತ್ತು. ಚೀನಾ ತೈಪೆಯನ್ನು ಫೈನಲ್ ಪಂದ್ಯದಲ್ಲಿ ಪರಾಭವಗೊಳಿಸಿದ ಭಾರತೀಯ ಮಹಿಳಾ ಕಬಡ್ಡಿ ತಂಡ ಚಿನ್ನ ಗೆದ್ದಿತು.
ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.
ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತಕ್ಕೆ ದೊರಕಿದ ಚೊಚ್ಚಲ ಚಿನ್ನದ ಪದಕ ಇದಾಗಿದೆ.ಡಬಲ್ಸ್ ವಿಶ್ವ ರ್ಯಾಂಕಿಂಗ್ನಲ್ಲಿ ಮೂರನೇ ಸ್ಥಾನದಲ್ಲಿರುವ ಸಾತ್ವಿಕ್-ಚಿರಾಗ್ ಜೋಡಿ, ಫೈನಲ್ನಲ್ಲಿ ಕೊರಿಯಾದ ಚೊಯ್ ಸೊಲ್ ಹಾಗೂ ಕಿಮ್ ವೊನ್ ಹೊ ವಿರುದ್ಧ 21-18 21-16ರ ಅಂತರದಲ್ಲಿ ಗೆಲುವು ದಾಖಲಿಸಿದರು.
ಮಹಿಳಯರ ಹಾಕಿಯಲ್ಲಿ ಭಾರತದ ಮಹಿಳಾ ಹಾಕಿ ತಂಡ ಕಂಚು ಗೆದ್ದಿದೆ.