ಅಜ್ಜಾವರ: ಅಜ್ಜಾವರ ಗ್ರಾಮದ ಅಡ್ಪಂಗಾಯದಲ್ಲಿ ದ.ಕ ಜಿಲ್ಲಾ ಪಂಚಾಯತ್ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ ರಾಜ್ಯ ವಲಯ ಯೋಜನೆಯಡಿ 27 ಲಕ್ಷದ 80 ಸಾವಿರದಲ್ಲಿ ನಿರ್ಮಾಣವಾದ ನೂತನ ಕೊಠಡಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಗ್ರಾ.ಪಂ ಅಧ್ಯಕ್ಷರಾದ ಬೇಬಿ ಕಲ್ತಡ್ಕ , ಮಾಜಿ ಜಿ.ಪಂ.ಸದಸ್ಯ ಧನಂಜಯ ಅಡ್ಪಂಗಾಯ, ರಾಹುಲ್ ಅಡ್ಪಂಗಾಯ , ಲೀಲಾ ಮನಮೋಹನ್ , ಶಿಕ್ಷಣಾಧಿಕಾರಿಗಳಾದ ರಮೇಶ್ ಬಿ ಇ , ಶೀತಲ್ , ಟಿ ಎಂ ಶಾಹಿದ್ ತೆಕ್ಕಿಲ್ , ಸದಾನಂದ ಮಾವಜಿ , ಹಸೈನಾರ್ ಹಾಜಿ ಗೋರಡ್ಕ , ಶಾಲಾ ಮುಖ್ಯ ಶಿಕ್ಷಕಿ ಧನಲಕ್ಷ್ಮಿ , ಅಶ್ರಫ್ ಸಅದಿ, ಅಬ್ಬಾಸ್ ಎ ಬಿ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.









