ಬೆಂಗಳೂರು: ಭಾರತದ ಮೊದಲ ಸೂರ್ಯ ಮಿಷನ್ ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯು ನಾಲ್ಕನೇ ಕಕ್ಷೆಯ ಬದಲಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಸೆಪ್ಟೆಂಬರ್ 2ರಂದು ಉಡಾವಣೆಯಾದ ಮಿಷನ್ನ ನಾಲ್ಕನೇ ಕಕ್ಷೆ ಬದಲಾವಣೆ ಸೆ.15ರಂದು ಮುಂಜಾನೆ 2.15ಕ್ಕೆ ಪೂರ್ಣಗೊಂಡಿದೆ.
ಇದೀಗ ಬಾಹ್ಯಾಕಾಶ ನೌಕೆ 256 ಕಿಲೋಮೀಟರ್ 1,21,973 ಕಿಲೋಮೀಟರ್ ಕಕ್ಷೆಯಲ್ಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯನ್ನು ಲಗ್ರೇಂಜ್ ಪಾಯಿಂಟ್
1ಕ್ಕೆ ಕಳುಹಿಸಲಾಗುತ್ತಿದೆ. ಭೂಮಿಯಿಂದ ಲಾಗ್ರೇಂಜ್ ಪಾಯಿಂಟ್ 1 ರ ಅಂತರವು 15 ಲಕ್ಷ ಕಿಲೋಮೀಟರ್ಗಳು, ಆದರೆ ಸೂರ್ಯನಿಂದ ಭೂಮಿಯ ದೂರವು 15 ಕೋಟಿ ಕಿಲೋಮೀಟರ್ಗಳು. ಸೆಪ್ಟೆಂಬರ್ 2 ರಂದು ಆದಿತ್ಯ ಎಲ್1 ಮಿಷನ್ ಉಡಾವಣೆಯಾಗಿದ್ದು, ಸೆಪ್ಟೆಂಬರ್ 3ರಂದು ಮೊದಲ ಕಕ್ಷೆ ಬದಲಾವಣೆ, ಸೆಪ್ಟೆಂಬರ್ 5ರಂದು ಎರಡನೇ ಕಕ್ಷೆಯ ಬದಲಾವಣೆ, ಸೆ.10ರಂದು ಮೂರನೇ ಕಕ್ಷೆ ಬದಲಾವಣೆ ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಒಟ್ಟು ಐದು ಬಾರಿ ಕಕ್ಷೆ ಬದಲಾವಣೆ ಮಾಡಿದ ಬಳಿಕ ಅಧ್ಯಯನ ಉದ್ದೇಶಿಸಿರುವ ಲ್ಯಾಂಗ್ರೇಜ್ ಪಾಯಿಂಟ್ನತ್ತ ಆದಿತ್ಯ ಎಲ್1 ಮಿಷನ್ ಸಾಗಲಿದೆ. ಲ್ಯಾಂಗ್ರೇಜ್ ಪಾಯಿಂಟ್ ತಲುಪಲು 125 ದಿನಗಳು ಹಿಡಿಯುತ್ತದೆ. ಐದನೇ ಭೂಮಿಯ ಬೌಂಡ್ ಮ್ಯಾನ್ಯೂವರ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಆದಿತ್ಯ L-1 ತನ್ನ 110-ದಿನಗಳ ಪ್ರಯಾಣಕ್ಕಾಗಿ ಲಾಗ್ರೇಂಜ್ ಪಾಯಿಂಟ್ಗೆ ಹೊರಡಲಿದೆ. ಬಾಹ್ಯಾಕಾಶ ನೌಕೆಯ ಮೂಲಕ ಸೂರ್ಯನ ಚಲನವಲನಗಳ ಮೇಲೆ ನಿಗಾ ಇಡಲು ಇದು ನೆರವಾಗಲಿದೆ ಎಂದು ಇಸ್ರೋ ಹೇಳಿದೆ. ಆದಿತ್ಯ L-1 ನೊಂದಿಗೆ ಹಲವು ರೀತಿಯ ಸಾಧನಗಳನ್ನು ಕಳುಹಿಸಲಾಗಿದೆ, ಅದರ ಮೂಲಕ ಸೂರ್ಯನನ್ನು ಅಧ್ಯಯನ ಮಾಡಲಾಗುತ್ತದೆ. ಸೌರ ಜ್ವಾಲೆಗಳು, ಸೂರ್ಯನಿಂದ ಹೊರಹೊಮ್ಮುವ ಕರೋನಲ್ ಮಾಸ್ ಎಜೆಕ್ಷನ್ಗಳಂತಹ ವಿಷಯಗಳ ಮೇಲೆ ಅಧ್ಯಯನ ನಡೆಸಲಿದೆ.