ಮಂಡೆಕೋಲು:ತೋಟಗಾರಿಕೆ ಇಲಾಖೆ ಸುಳ್ಯ ಇದರ ವತಿಯಿಂದ ಸುಳ್ಯ ರೈತ ಉತ್ಪಾದಕ ಕಂಪೆನಿಯ ಸಹಯೋಗದೊಂದಿಗೆ, ಗ್ರಾಮ ಪಂಚಾಯತ್ ಮಂಡೆಕೋಲು ಮಂಡೆಕೋಲು,ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ವೀರ ವನಿತೆ ಕ್ರೀಡಾ ಮತ್ತು ಕಲಾ ಸಂಘ ಮಂಡೆಕೋಲು ಇದರ ಸಹಕಾರದೊಂದಿಗೆ ‘ಅಡಿಕೆಯಲ್ಲಿ, ವೈಜ್ಞಾನಿಕ ಕೃಷಿ ಹಾಗೂ ಹನಿ ನೀರಾವರಿ ಬಗ್ಗೆ ರೈತರಿಗೆ ಮಾಹಿತಿ ಮತ್ತು
ಸಂವಾದ ಕಾರ್ಯಕ್ರಮ ನಡೆಯಿತು. ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಪೇರಾಲುಗುತ್ತು ಉದ್ಘಾಟಿಸಿದರು. ಮಂಡೆಕೋಲು
ಗ್ರಾಮ ಪಂಚಾಯತ್ ಅಧ್ಯಕ್ಷ
ಅಧ್ಯಕ್ಷರು ಯು.ಕುಕಲ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ತೋಟಗಾರಿಕಾ ಇಲಾಖೆಯ
ಹಿರಿಯ ಸಹಾಯಕ ನಿರ್ದೇಶಕರಾದ ಸುಹಾನ ಪಿ. ಕೆ.
ಸುಳ್ಯ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್, ವೀರ ವನಿತೆ ಕ್ರೀಡಾ ಮತ್ತು ಕಲಾ ಸಂಘ ಮಂಡೆಕೋಲು ಇದರ ಅಧ್ಯಕ್ಷೆ ವಸಂತಿ ಉಗ್ರಾಣಿಮನೆ,ಭಾಗವಹಿಸಿದ್ದರು.ಸಂಪನ್ಮೂಲ ವ್ಯಕ್ತಿಗಳಾಗಿ
ಸಿಪಿಸಿಆರ್ಐ ವಿಟ್ಲ ಇಲ್ಲಿಯ ವಿಜ್ಞಾನಿ ಡಾ. ನಾಗರಾಜ, ಜೈನ್ ಇರಿಗೇಷನ್ ಸಿಸ್ಟಮ್ನ ಪ್ರಾದೇಶಿಕ ವ್ಯವಸ್ಥಾಪಕರಾದ ಹಿಮಾಂಶು ಚತುರ್ವೇದಿ,
ಹಿರಿಯ ವಿಜ್ಞಾನಿ ನಿರಂಜನ್ ನಂದಿಪುರ ಭಾಗವಹಿಸಿ ಕಾರ್ಯಾಗಾರ ನಡೆಸಿಕೊಟ್ಟರು.