ಸುಳ್ಯ:ಸುಳ್ಯ ಪೊಲೀಸರ ಕೈಯಿಂದ ಆರೋಪಿಯೋರ್ವ ತಪ್ಪಿಸಿಕೊಂಡಿದ್ದು ಈತನ ಪತ್ತೆಗೆ ಪೊಲೀಸರು ವ್ಯಾಪಕವಾಗಿ ಬೀಸಿದ್ದಾರೆ. ಆರೋಪಿಯ ಭಾವಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಫೋಟೋದಲ್ಲಿ ಕಾಣಿಸಿದ ವ್ಯಕ್ತಿಯನ್ನು ಕಂಡಲ್ಲಿ ತಕ್ಷಣ ಪೋಲಿಸ್ ಇಲಾಖೆಗೆ
ಮಾಹಿತಿ ನೀಡುವಂತೆ ಕೋರಲಾಗಿದೆ. ಪ್ರಕರಣವೊಂದರಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಬೇಕಾಗಿದ್ದ ಈತನು ಸುಳ್ಯದ ಸುತ್ತ ಮುತ್ತಲಿದ್ದು ಸಾರ್ವಜನಿಕರಿಗೆ ಕಂಡುಬಂದಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಈತ ಇಂದು ಸಂಜೆ ಪೋಲೀಸರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದ ಈತನನನ್ನು ಪೋಲೀಸರು ಬಂಧಿಸಿ ತಂದಿದ್ದಾಗ ಈತ ತಪ್ಪಿಸಿಕೊಂಡಿದ್ದಾನೆ ಎಂದು ಹೇಳಲಾಗಿದೆ