ಸುಳ್ಯ:ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ತಾಲೂಕು ಹಾಗೂ ಖೇಲೊ ಭಾರತ್ ಇವರ ವತಿಯಿಂದ ಫೆ. 15 ರಂದು ತಾಲೂಕು ಮಟ್ಟದ ಆಜಾದ್ ಟ್ರೋಫಿ ವಾಲಿಬಾಲ್ ಪಂದ್ಯಾಟ ನಡೆಯಲಿದೆ. ಇದರ ಕರಪತ್ರ ಹಾಗೂ ಟೀ-ಶರ್ಟ್ ಬಿಡುಗಡೆ ಕಾರ್ಯಕ್ರಮ ಸುಳ್ಯದ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಎಬಿವಿಪಿ ಪ್ರಮುಖರು, ಸಂಘಟನೆಯ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.ವಾಲಿಬಾಲ್ ಪಂದ್ಯಾಟವು ಫೆಬ್ರವರಿ 15 ಆದಿತ್ಯವಾರ ಸುಳ್ಯದ ಜೆಒಸಿ ಮೈದಾನದಲ್ಲಿ ನಡೆಯಲಿದೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.







