ರಾಯಬರೇಲಿ:ನಾಮಪತ್ರ ಸಲ್ಲಿಕೆ ಬಳಿಕ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ರಾಯಬರೇಲಿಯಲ್ಲಿ ಚುನಾವಣಾ ರ್ಯಾಲಿ ನಡೆಸಿದ ರಾಹುಲ್ ಗಾಂಧಿಗೆ ಜನರಿಂದ ಒಂದು ಪ್ರಶ್ನೆ ಎದುರಾಗಿತ್ತು. ಯಾವಾಗ ಮದುವೆ ಆಗ್ತೀರಾ? ಎಂದು ಜನರ ಗುಂಪಿನಿಂದ
ಪ್ರಶ್ನೆ ತೇಲಿಬಂದಿದೆ.ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಜೊತೆಗೆ ಅವರ ಸಹೋದರಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಉಪಸ್ಥಿತರಿದ್ದರು.ಸೇರಿದ್ದ ಜನಸಮೂಹವು ರಾಹುಲ್ ಗಾಂಧಿಯ ಮದುವೆಯ ಬಗ್ಗೆ ಪ್ರಸ್ತಾಪಿಸಿದ್ದು, ನೀವು ಯಾವಾಗ ಮದುವೆಯಾಗುತ್ತೀರಿ? ಎಂದು ಕೇಳಿದರು. ಅದಕ್ಕೆ ಉತ್ತರ ನೀಡಿದ ರಾಹುಲ್ ಗಾಂಧಿ ಅಬ್ ಜಲ್ದಿ ಹೈ ಕರ್ನಿ ಪಡೆಗಿ (ನೀವಿಷ್ಟು ಕೇಳಿದ ಮೇಲೆ ನಾನು ಶೀಘ್ರದಲ್ಲೇ ಮದುವೆಯಾಗಬೇಕಾಗಿದೆ) ಎಂದು ರಾಹುಲ್ ಗಾಂಧಿ ನಗುತ್ತಲೇ ಹೇಳಿದ್ದಾರೆ. ಇದಕ್ಕೆ ಪ್ರಿಯಾಂಕಾ ಗಾಂಧಿ ಕೂಡ ನಗು ಸೂಸಿದ್ದಾರೆ.