ಸುಳ್ಯ: ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಅವರು ಮೇ.1 ರಂದು ಅರಂತೋಡು, ಗೂನಡ್ಕ, ಕಲ್ಲುಗುಂಡಿ ಭಾಗದಲ್ಲಿ ಚುನಾವಣಾ ಪ್ರಚಾರ ಕೈಗೊಂಡರು. ಮನೆ ಮನೆ ಭೇಟಿ ಮಾಡಿ ಮತ ಯಾಚನೆ ನಡೆಸಿದರು. ಅರಂತೋಡು ಹಾಗು ಕಲ್ಲುಗುಂಡಿಯಲ್ಲಿ ಕಾರ್ನರ್
ಮೀಟಿಂಗ್ ನಡೆಯಿತು. ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್, ರಾಜ್ಯ ಉಪಾಧ್ಯಕ್ಷ ವಿವೇಕಾನಂದ, ಆಪ್ ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ, ಮುಖಂಡರಾದ ರಶೀದ್ ಜಟ್ಟಿಪಳ್ಳ, ಖಲಂದರ್ ಎಲಿಮಲೆ, ಗುರು ಪ್ರಸಾದ್ ಮೇರ್ಕಜೆ, ಅಬ್ಲುಲ್ ಖಾದರ್ ಕೂರ್ನಡ್ಕ, ಸುರೇಶ್ ಮುಂಡೋಕಜೆ, ಹರೀಶ್, ಸತ್ತಾರ್ ಅಜ್ಜಾವರ, ಪ್ರದೀಪ್ ತುಂಕೂರ್, ವಿಜಯ್ ಭಗವಾನ್, ವೇದರಾಜು, ಲೋಹಿತ್ ಮತ್ತಿತರರು ಉಪಸ್ಥಿತರಿದ್ದರು.