ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಇಂದು ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡರು. ಪಂಜ, ಬಳ್ಪ, ಏನೇಕಲ್ಲು ಮತ್ತು ಗುತ್ತಿಗಾರು ಎಂಬಲ್ಲಿ ಮನೆ ಮನೆ ಪ್ರಚಾರ ಮತ್ತು
ಕಾರ್ನರ್ ಸಭೆಗಳು ನಡೆಯಿತು. ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ ಮಾತನಾಡಿ ಪಕ್ಷದ ತತ್ವ ಮತ್ತು ಸಾಧನೆಗಳ ಬಗ್ಗೆ ಮಾತನಾಡಿದರು. ಜನಪರ ಆಡಳಿತಕ್ಕಾಗಿ ಎಪಿಗೆ ಮತ ನೀಡುವಂತೆ ಅವರು ವಿನಂತಿಸಿದರು.
ಪ್ರಚಾರ ಕಾರ್ಯಡಲ್ಲಿ, ಆಪ್ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ,
ಕಾರ್ಯಕರ್ತರಾದ ಗುರುಪ್ರಸಾದ್ ಮೆರ್ಕಜೆ, ಖಲಂದರ್ ಏಲಿಮಲೆ, ಗಣೇಶ್ ಕಂಡಡ್ಕ, ರಾಮಕೃಷ್ಣ ಬೀರಮಂಗಿಲ, ಸಂಶುದ್ದೀನ್ ಕೆ ಎಂ, ವಸಂತ, ಸಿಂಚನ, ಬಶೀರ್, ಹರೀಶ್ ಮತ್ತಿತರರು ಉಪಸ್ಥಿತರಿದ್ದರು