ಸುಳ್ಯ:ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸುಳ್ಯ, ಜೂನಿಯರ್ ರೆಡ್ ಕ್ರಾಸ್ ಘಟಕ ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಕಾರದೊಂದಿಗೆ ‘ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ’ವು ರಥಬೀದಿಯ ರೋಟರಿ ಹೈಯರ್ ಪ್ರೈಮರಿ ಸ್ಕೂಲ್ ನಡೆಯಿತು.ರೋಟರಿ ವಿದ್ಯಾ ಸಂಸ್ಥೆಗಳ

ಸಂಚಾಲಕ ಪ್ರಭಾಕರನ್ ನಾಯರ್ ದೀಪ ಬೆಳಗಿಸಿ ಉದ್ಘಾಟಿಸಿದರು.
ರೋಟರಿ ಚಾರಿಟೇಬಲ್ ಟ್ರಸ್ಟ್ನ ಚೇರ್ಮನ್ ರಾಮ್ ಮೋಹನ್ ಕೆ.ಎನ್ ಅಧ್ಯಕ್ಷತೆ ವಹಿಸಿದ್ದರು.ರೋಟರಿ ಕಾಲೇಜಿನ ಪ್ರಾಂಶುಪಾಲೆ ಶೋಭಾ ಬೊಮ್ಮೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾಲೇಜಿನ ರೆಡ್ ಕ್ರಾಸ್ ಘಟಕದ ಸಹ ನಿರ್ದೇಶಕ,ಉಪನ್ಯಾಸಕ ಹರ್ಷಿತ್.ಜಿ.ಜೆ, ವಿದ್ಯಾರ್ಥಿ ನಾಯಕರಾದ ಜೀವನ್.ಕೆ ಮತ್ತು ದಿಶಾ ಹಾಗೂ ಪ್ರಭಾಕರನ್ ನಾಯರ್ ಸಿ ಹೆಚ್ ರವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 176 ಆಧಾರ್ ನೋಂದಣಿ ಮಾಡಲಾಗಿತ್ತು.





