ನವದೆಹಲಿ: ಲೋಕಸಭಾ ಚುನಾವಣೆಯ 7ನೇ ಹಾಗೂ ಅಂತಿಮ ಹಂತದ ಮತದಾನ ನಡೆಯಲಿರುವ 57 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿದೆ.ಪಂಜಾಬ್ ಹಾಗೂ
ಉತ್ತರ ಪ್ರದೇಶದ ತಲಾ 13 ಕ್ಷೇತ್ರಗಳು, ಪಶ್ಚಿಮ ಬಂಗಾಳದ 9, ಬಿಹಾರದ 8, ಒಡಿಶಾದ 6, ಹಿಮಾಚಲ ಪ್ರದೇಶದ 4, ಜಾರ್ಖಂಡ್ನ 3, ಚಂಡೀಗಢದ 1 ಕ್ಷೇತ್ರಕ್ಕೆ ನಾಳೆ (ಜೂನ್ 1 ರಂದು) ಮತದಾನ ನಡೆಯಲಿದೆ.ಇದರೊಂದಿಗೆ ದೇಶದಾದ್ಯಂತ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಪೂರ್ಣಗೊಂಡಂತಾಗಲಿದೆ.
ಎಲ್ಲ ಹಂತಗಳ ಒಟ್ಟು 543 ಕ್ಷೇತ್ರಗಳ ಫಲಿತಾಂಶ ಜೂನ್ 4ರಂದು ಹೊರಬೀಳಲಿದೆ.