ನವದೆಹಲಿ: ಐದು ರಾಜ್ಯಗಳ ವಿಧಾನಸಭೆಗೆ ನಡೆಯುವ ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗವು ಇಂದು (ಅ.9) ಪ್ರಕಟಿಸಿತು. ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಚುನಾವಣಾ ಆಯುಕ್ತ ರಾಜೀವ್ ಕುಮಾರ್, ಮಧ್ಯಪ್ರದೇಶ, ಛತ್ತೀಸ್ಗಡ, ರಾಜಸ್ಥಾನ, ತೆಲಂಗಾಣ ಹಾಗೂ ಮಿಜೋರಾಂ ರಾಜ್ಯಗಳ ಚುನಾವಣಾ
ವೇಳಾಪಟ್ಟಿಯನ್ನು ಘೋಷಿಸಿದರು.
ಮಿಜೋರಾಂನಲ್ಲಿ ನವೆಂಬರ್ 7, ಛತ್ತೀಸ್ಗಡದಲ್ಲಿ ಮೊದಲ ಹಂತ ನವೆಂಬರ್ 7, ಎರಡನೇ ಹಂತ ನವೆಂಬರ್ 17, ಮಧ್ಯಪ್ರದೇಶದಲ್ಲಿ ನವೆಂಬರ್ 17, ರಾಜಸ್ಥಾನದಲ್ಲಿ ನವೆಂಬರ್ 23, ತೆಲಂಗಾಣದಲ್ಲಿ ನವೆಂಬರ್ 30 ರಂದು ಚುನಾವಣೆ ನಡೆಯಲಿದೆ.
ಡಿಸೆಂಬರ್ 3 ರಂದು ಎಲ್ಲಾ 5 ರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ.
40 ಸದಸ್ಯರಿರುವ ಮಿಜೋರಾಂ ವಿಧಾನಸಭೆಯ ಅವಧಿ ಡಿಸೆಂಬರ್ನಲ್ಲಿ ಕೊನೆಗೊಳ್ಳುತ್ತಿದ್ದರೆ, 90 ಸದಸ್ಯ ಬಲದ ಛತ್ತೀಸ್ಗಢ ವಿಧಾನಸಭೆ ಮತ್ತು ಮೂರು ರಾಜ್ಯಗಳ ಅವಧಿ ಜನವರಿಯಲ್ಲಿ ಕೊನೆಗೊಳ್ಳಲಿದೆ. ಮಧ್ಯಪ್ರದೇಶ (230-ಸದಸ್ಯ), ರಾಜಸ್ಥಾನ (200-ಸದಸ್ಯ), ಮತ್ತು ತೆಲಂಗಾಣ (119-ಸದಸ್ಯ) ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ.
ಚುನಾವಣಾ ಆಯೋಗವು ಕಳೆದ ಎರಡು ತಿಂಗಳಿನಿಂದ ಐದು ಚುನಾವಣೆಗೆ ಒಳಪಡುವ ರಾಜ್ಯಗಳಿಗೆ ಭೇಟಿ ನೀಡಿ ಸಿದ್ಧತೆಗಳ ಪರಿಶೀಲನೆ ನಡೆಸಿ ಇಂದು ಚುನಾವಣೆ ಘೋಷಿಸಿದೆ.