ನವದೆಹಲಿ: ನಾಳೆ((ಮೇ.13) ನಡೆಯಲಿರುವ ಲೋಕಸಭಾ ಚುನಾವಣೆಯ 4ಹಂತದ ಚುನಾವಣೆಯ ಮತದಾನಕ್ಕೆ ಕೇಂದ್ರ ಚುನಾವಣಾ ಆಯೋಗ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದು, ನಾಳೆ 9 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ 96 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ನಾಳೆ ಚುನಾವಣೆ ನಡೆಯುವ
96 ಕ್ಷೇತ್ರಗಳಲ್ಲಿ ಒಟ್ಟು 1717 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ನಾಳೆ ನಡೆಯಲಿರುವ ಮತದಾನದಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ಯಾಧವ್, ಕೇಂದ್ರ ಸಚಿವ ನಿತ್ಯಾನಂದ ರೈ, ಕೇಂದ್ರ ಸಚಿವ ಅರ್ಜುನ್ಮುಂಡಾ, ಕಾಂಗ್ರೆಸ್ನ ಹಿರಿಯ ನಾಯಕ ಅಧೀರ್ ರಂಜನ್ಚೌಧರಿ, ನಟ ಶತ್ರುಘ್ನಸಿನ್ಹಾ, ಟಿಎಂಸಿಯ ಮೊಹುವಾ ಮೊಹಿತ್ರಾ ಸೇರಿದಂತೆ ಹಲವು ಘಟಾನುಘಟಿಗಳ ರಾಜಕೀಯ ಭವಿಷ್ಯವನ್ನು ಮತದಾರ ನಿರ್ಧರಿಸಲಿದ್ದಾನೆ.
ನಾಳೆ ಆಂಧ್ರಪ್ರದೇಶದ ಎಲ್ಲಾ 25 ಲೋಕಸಭಾ ಕ್ಷೇತ್ರಗಳು, ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳು, ಜಾರ್ಖಂಡ್ನ 4 ಒಡಿಶಾದ 4, ಉತ್ತರ ಪ್ರದೇಶದ 13, ಮಧ್ಯಪ್ರದೇಶದ 8, ಬಿಹಾರದ 5, ಮಹಾರಾಷ್ಟ್ರದ 11, ಪಶ್ಚಿಮ ಬಂಗಾಳದ 8, ಜಮ್ಮು-ಕಾಶ್ಮೀರದ 1 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ದೇಶದಲ್ಲಿ ಈಗಾಗಲೇ 3 ಹಂತದ ಲೋಕಸಭಾ ಚುನಾವಣೆಯ ಮತದಾನ ಪೂರ್ಣಗೊಂಡಿದೆ. ಮೇ 20 ರಂದು 5ನೇ, ಮೇ 25 ರಂದು 6ನೇ ಮತ್ತು ಜೂ. 1 ರಂದು 7 ಹಾಗೂ ಅಂತಿಮ ಹಂತದ ಚುನಾವಣೆಗಳು ನಡೆಯಲಿವೆ. ’ಜೂ. 4 ರಂದು ಎಲ್ಲ ಕ್ಷೇತ್ರಗಳ ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.