ಗೆಬೆಹಾ, ದಕ್ಷಿಣ ಆಫ್ರಿಕಾ: ಟೋನಿ ಡಿ ಝಾರ್ಜಿ ಅಜೇಯ ಶತಕದ ಬಲದಿಂದ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 8 ವಿಕೆಟ್ಗಳಿಂದ ಭಾರತದ ಎದುರು ಜಯಿಸಿತು.
ಮೊದಲು ಬ್ಯಾಟ್ ಮಾಡಿದ ಭಾರತ ಸಾಯಿ ಸುದರ್ಶನ್ 83 ಎಸೆತಗಳ ಇನಿಂಗ್ಸ್ನಲ್ಲಿ 62 (4×7, 6×1) ಹಾಗೂ
ನಾಯಕ ಕೆ.ಎಲ್. ರಾಹುಲ್ (56; 64ಎ, 4X7) ಅವರ ಅರ್ಧಶತಕದ ಬಲದಿಂದ ತಂಡವು 46.2 ಓವರ್ಗಳಲ್ಲಿ 211 ರನ್ ಗಳಿಸಿತು.ಸಾಧಾರಣ ಗುರಿ ಬೆನ್ನಟ್ಟಿದ ಆತಿಥೇಯ ತಂಡದ ಝಾರ್ಜಿ (ಔಟಾಗದೆ 119; 122ಎ, 4X9, 6X6) ಮತ್ತು ರೀಜಾ ಹೆನ್ರಿಕ್ಸ್ (52; 81ಎ) ಮೊದಲ ವಿಕೆಟ್ ಜೊತೆಯಾಟದಲ್ಲಿ 130 ರನ್ ಸೇರಿಸಿದರು. ಇದರಿಂದಾಗಿ ತಂಡದ ಜಯವು ಸುಲಭವಾಯಿತು. 3 ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು.ತಮ್ಮ ವೃತ್ತಿಜೀವನದ ನಾಲ್ಕನೇ ಏಕದಿನ ಪಂದ್ಯವಾಡಿದ ಝಾರ್ಜಿ ಭಾರತದ ಬೌಲರ್ಗಳನ್ನು ದಂಡಿಸಿ ಚೊಚ್ಚಲ ಶತಕ ದಾಖಲಿಸಿದರು.















