ಐಜ್ವಾಲ್: ಮಿಜೋರಾಂ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಲಾಲ್ದುಹೋಮ ನೇತೃತ್ವದ ಜೋರಾಂ ಪೀಪಲ್ಸ್ ಮೂವ್ಮೆಂಟ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದೆ. ಆಡಳಿತರೂಢ ಮಿಜೋ ನ್ಯಾಷನಲ್ ಫ್ರಂಟ್ ಅಧಿಕಾರ
ಕಳೆದುಕೊಂಡಿದೆ.40 ವಿಧಾನಸಭಾ ಸದಸ್ಯ ಬಲದ ಮಿಜೋರಾಂನಲ್ಲಿ ಝಡ್ಪಿಎಂ 27 ಸ್ಥಾನಗಳನ್ನು ಗೆದ್ದು ಬಹುಮತ ಸಾಧಿಸಿದೆ.
ಎಂಎನ್ಎಫ್ ಪಕ್ಷ ಕೇವಲ 10 ಸ್ಥಾನಗಳನ್ನು ಗೆದ್ದಿದ್ದು, ಬಿಜೆಪಿ 2 ಹಾಗೂ ಕಾಂಗ್ರೆಸ್ 1 ಕ್ಷೇತ್ರದಲ್ಲಿ ಗೆದ್ದಿದೆ. ಐಝ್ವಾಲ್ ಪೂರ್ವದಲ್ಲಿ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಝೊರಾಂಥಾಂಗ 2100 ಮತಗಳ ಅಂತರದಿಂದ ಸೋತಿರುವುದು ಕೂಡಾ ಎಂಎನ್ಎಫ್ಗೆ ತೀವ್ರ ಆಘಾತವಾಗಿದೆ. ಉಪಮುಖ್ಯಮಂತ್ರಿ ತೌನ್ಲುಯಾ ಕೂಡ ಪರಾಜಿತರಾಗಿದ್ದಾರೆ. ಕಳೆದ ಭಾರಿ 26 ಸ್ಥಾನ ಪಡೆದು ಎಂಎನ್ಎಫ್ ಅಧಿಕಾರ ಪಡೆದಿತ್ತು.ಈ ಮಧ್ಯೆ, ಝಡ್ಪಿಎಂ ಮುಖ್ಯಸ್ಥ ಮತ್ತು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಲಾಲ್ದುಹೋಮ ಅವರು ಸರ್ಚಿಪ್ನಿಂದ ಗೆಲುವು ಸಾಧಿಸಿದ್ದಾರೆ.












